Advertisement

ಕೊರಿಯಾ ಹೂಡಿಕೆ ಬಜೆಟ್‌

09:50 AM Apr 20, 2018 | Karthik A |

ಟೋಕಿಯೋ/ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮೇ- ಜೂನ್‌ನಲ್ಲಿ ಮಾತುಕತೆಗೆ ಉತ್ತರ ಕೊರಿಯಾ ಸಿದ್ಧತೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಕಳೆದ ವಾರ ಮಂಡಿಸಲಾಗಿದ್ದ ರಾಷ್ಟ್ರೀಯ ಬಜೆಟ್‌ನಲ್ಲಿಯೂ ಆಮೂಲಾಗ್ರ ಬದಲಾವಣೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು, ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿ ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಪ್ರಸ್ತಾವ‌ ಸೇರಿದಂತೆ ಪಾತಾಳಕ್ಕೆ ಕುಸಿದಿರುವ ಆರ್ಥವ್ಯವಸ್ಥೆಯನ್ನು ಸುಧಾರಣೆಯ ಹಾದಿಗೆ ತರುವ ಪ್ರಯತ್ನಗಳನ್ನು ಮಾಡಲಾಗಿದೆ. ಕುತೂಹಲಕಾರಿ ಅಂಶವೆಂದರೆ ಕ್ಷಿಪಣಿ, ರಾಕೆಟ್‌ಗಾಗಿ ಮಾಡುವ ವೆಚ್ಚ ತಗ್ಗಿಸಲಾಗಿದೆ. ಇಂಥ ಭಾರೀ ಸುಧಾರಣೆಯ ಬಜೆಟನ್ನು ಕಳೆದ ವಾರ ಅಂಗೀಕರಿಸಲಾಗಿದೆ. ಆದರೆ ಅಲ್ಲಿನ ಸರಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಬಗ್ಗೆ ಹಲವಾರು ರಾಷ್ಟ್ರಗಳ ವಿದೇಶಾಂಗ ನೀತಿ ತಜ್ಞರು ಸಂಶಯದಿಂದಲೇ ಪರಿಶೀಲನೆ ನಡೆಸುತ್ತಿದ್ದಾರೆ. 1981ರ ಬಳಿಕ ಬಜೆಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ವಿಶ್ವದ ಇತರ ರಾಷ್ಟ್ರಗಳಿಗೆ ಹಂಚಿಕೊಳ್ಳುವುದನ್ನು ತಡೆಹಿಡಿದಿತ್ತು.

Advertisement

ಹೊರ ನಡೆಯುವೆ: ಈ ನಡುವೆ ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್‌ ಉನ್‌ ಜತೆ ಶೀಘ್ರವೇ ಮಾತುಕತೆ ನಡೆಸುವುದನ್ನು ಖಚಿತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಿರೀಕ್ಷಿತ ಫ‌ಲಿತಾಂಶ ಕಾಣದೇ ಇದ್ದರೆ ಪ್ರಕ್ರಿಯೆಯಿಂದ ಹೊರನಡೆಯುವುದಾಗಿ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಜಪಾನ್‌ ಪ್ರಧಾನಿ ಶಿಂಝೋ ಅಬೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಹಳಷ್ಟು ಒತ್ತಡ ಹೇರಿದ್ದರಿಂದ ಉತ್ತರ ಕೊರಿಯಾ ಅಣ್ವಸ್ತ್ರಗಳನ್ನು ನಾಶಕ್ಕೆ ಒಪ್ಪಿತು ಎಂದಿದ್ದಾರೆ ಟ್ರಂಪ್‌.

Advertisement

Udayavani is now on Telegram. Click here to join our channel and stay updated with the latest news.

Next