Advertisement
ವಿಜಯನಗರದ ತುಂಬಾ ಉತ್ತರ ಕರ್ನಾಟಕ ಭಾಗದ ರುಚಿಯನ್ನು ಹರಡುತ್ತಿರುವುದು “ಮಲ್ಲಿಗೆ ಊಟದ ಮನೆ’. ವಿಜಯನಗರದ ಮಾರುತಿ ಮಂದಿರದ ಪಕ್ಕದ ರಸ್ತೆಯಲ್ಲಿರುವ ಈ ಖಾನಾವಳಿಗೆ ಹೋದವರಿಗೆ ಮಿನಿ ಉತ್ತರ ಕರ್ನಾಟಕದ ದರ್ಶನವಾಗುತ್ತದೆ.
ಕೇವಲ 65 ರೂಪಾಯಿಗೆ ಎರಡು ಜೋಳದ ರೊಟ್ಟಿ, ಮೂರು ಥರದ ಪಲ್ಯಗಳು ಹಾಗೂ ಅನ್ನ-ಸಾರು ಅಥವಾ ಕಲರ್ಡ್ ರೈಸ್ ಅನ್ನು ಇಲ್ಲಿ ಉಣಬಡಿಸುತ್ತಾರೆ. ಅÇÉೇ ತಯಾರಿಸಿ ಬಡಿಸುವ ಬಿಸಿಬಿಸಿ ರೊಟ್ಟಿ ಊಟದ ಜೊತೆಗೆ ಸೌತೆಕಾಯಿ, ಮೆಂತೆ ಸೊಪ್ಪು ಹಾಗೂ ಮೂಲಂಗಿಯ ಸಲಾಡ್ ಊಟದ ಗಮ್ಮತ್ತನ್ನು ಮತ್ತಷ್ಟು ಹೆಚ್ಚಿಸುತ್ತವೆ.
Related Articles
ಉತ್ತರ ಕರ್ನಾಟಕದ ಸಿಗ್ನೇಚರ್ ತಿನಿಸು ಎನ್ನಬಹುದಾದ ಮಿರ್ಚಿ ಬಜ್ಜಿ ಇಲ್ಲಿನ ವಿಶೇಷ ಆಕರ್ಷಣೆ. ದೇಹಕ್ಕೆ ತಂಪು ಹಾಗೂ ರುಚಿರುಚಿ ಪಾನೀಯ ಅನ್ನಿಸುವ ಮಸಾಲ ಮಜ್ಜಿಗೆ ಕೂಡಾ ದೊರೆಯುತ್ತದೆ. ಜೋಳದ ರೊಟ್ಟಿ ಬೇಡ ಅನ್ನುವವರಿಗಾಗಿ ಮೇಥಿ ರೋಟಿ ಹಾಗೂ ಚಪಾತಿ ಸಹ ಲಭ್ಯ.
Advertisement
ಸಿಹಿಪ್ರಿಯರಿಗೆ ಸಿಹಿಸುದ್ದಿಸಿಹಿ ಪ್ರಿಯರಿಗಾಗಿ ಪ್ರತಿದಿನವೂ ಶೇಂಗಾ ಹೋಳಿಗೆ ಇದೆ. ಪ್ರತಿ ಶನಿವಾರ ಬೇಳೆ ಹೋಳಿಗೆಯೂ ದೊರೆಯುತ್ತದೆ. ತುಪ್ಪದ ಘಮವಿರುವ ಬೇಸನ್ ಲಾಡೂ ಕೂಡಾ ಲಭ್ಯ. ಸಿಹಿಯ ಹೊರತಾಗಿ ಶೇಂಗಾ ಚಟ್ನಿಪುಡಿ, ಗುರೆಳ್ಳು ಚಟ್ನಿಪುಡಿ ಸೇರಿದಂತೆ ಇನ್ನೂ ವಿವಿಧ ಬಗೆಯ ಚಟ್ನಿಪುಡಿಗಳು ಲಭ್ಯ. ಇಲ್ಲಿ ಸಿಗುವ ಎಲ್ಲ ಪದಾರ್ಥವೂ ಫ್ರೆಶ್ ಆಗಿರುತ್ತವೆ. ಮಲ್ಲಿಗೆ ಊಟದ ಮನೆ ಮಾಲೀಕ ಶ್ರೀಶೈಲ, ಬಾಗಲಕೋಟೆಯವರು. “ಈ ಮೊದಲು ಸಂಬಂಧಿಕರ ಹೋಟೆಲಿನಾಗ ಕೆಲ್ಸ ಮಾಡಿದ್ದನ್ರೀ. ಆರ್ ವರ್ಷದ ಹಿಂದ ಈ ಹೋಟ್ಲು ಶುರು ಹಚRಂಡನ್ರಿ. ನನ್ ಜತೀಗ ಅವ್ವ ಇದಾರ್ರೀ. ರೊಟ್ಟಿ ಬಡಿಯಾಕ ನಮ್ ಕಡೀ ಜನಾನೇ ಇದಾರ್ರೀ…’ ಅನ್ನುತ್ತಾರೆ. ಹಸಿದು ಬಂದವರಿಗೆ ರುಚಿರುಚಿಯಾದ ಊಟ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ಅಡುಗೆ ಆಗುವವರೆಗೂ ಅಮ್ಮನೂ, ನಾನೂ ಅಡುಗೆ ಮನೆಯಲ್ಲೇ ಇದ್ದು ಶುಚಿ-ರುಚಿಯ ಬಗ್ಗೆ ಕಾಳಜಿ ವಹಿಸುತ್ತೇವೆ ಅನ್ನುತ್ತಾರೆ ಶ್ರೀಶೈಲ. ಮನೆಗೂ ಒಯ್ಯಿರಿ
ಇಲ್ಲಿ ಕ್ಯಾಟರಿಂಗ್ ಸೌಲಭ್ಯ ಕೂಡಾ ಲಭ್ಯವಿದೆ. ಆರ್ಡರ್ ಕೊಟ್ಟರೆ ಹೋಳಿಗೆ, ಚಟ್ನಿಪುಡಿಗಳನ್ನು ತಯಾರಿಸಿಯೂ ಕೊಡುತ್ತಾರೆ. ಇಲ್ಲಿನ ಮತ್ತೂಂದು ವಿಶೇಷತೆ ಎಂದರೆ ಇಲ್ಲಿನ ಸಿಬ್ಬಂದಿ ವರ್ಗ. “ಏನ್ ಬಡಿಸಲಿ ಅಕ್ಕೋರೇ, ಅಣ್ಣೋರೆ’ ಅಂತ ನಗು ಮೊಗದಿಂದ ಉಪಚರಿಸುತ್ತಾ ಉದರದ ಜೊತೆಗೆ, ಮನಸ್ಸನ್ನೂ ತಂಪಾಗಿಸುತ್ತಾರೆ. ಗ್ರಾಹಕರನ್ನು ಅತಿಥಿಗಳಂತೆ ಸತ್ಕರಿಸುವ ಮಾಲೀಕ ಶ್ರೀಶೈಲರವರು, ಊಟ ಬಡಿಸುವುದು ಪುಣ್ಯದ ಕೆಲಸ ಅಂತಲೇ ನಂಬಿ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟವರು. ಶುಚಿ ರುಚಿಯ ಜೊತೆಗೆ ಗುಣಮಟ್ಟದಲ್ಲಿ ರಾಜಿ ಮಾಡಕೊಳ್ಳದಿರುವುದೇ ಅವರ ಯಶಸ್ಸಿನ ಗುಟ್ಟು. ಹೋಟೆಲ್‌ನ ಸಮಯ
ಮ. 12-3.30
ಸಂ. 7- 10
ಮಂಗಳವಾರ ರಜೆ ಎಲ್ಲಿದೆ?
ಮಲ್ಲಿಗೆ ಊಟದ ಮನೆ, ಮಾರುತಿ ಮಂದಿರ ರಸ್ತೆ, ವಿಜಯನಗರ
9741460777
7406460777