Advertisement

22ರಿಂದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ

03:42 PM Dec 20, 2018 | |

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.22 ಮತ್ತು 23 ರಂದು ಇಲ್ಲಿಯ ವೈಟಿಎಸ್‌ಎಸ್‌ ಮೈದಾನದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಡಾ| ಸೈಯ್ಯದ್‌ ಝಮೀರುಲ್ಲಾ ಷರೀಫ್‌ರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಡಿ.22 ರಂದು ಮುಂಜಾನೆ 8ಕ್ಕೆ ಶಾಸಕ ಶಿವರಾಮ ಹೆಬ್ಟಾರ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. 8:30ಕ್ಕೆ ಬಿಇಒ ಎನ್‌.ಆರ್‌. ಹೆಗಡೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

Advertisement

10ಕ್ಕೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸಮ್ಮೇಳನ ಉದ್ಘಾಟಿಸಲಿದ್ದು, 80ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಾಧ್ಯಕ್ಷ ಸೈಯದ್‌ ಝಮೀರುಲ್ಲಾ ಷರೀಫ್‌ರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾಸ್ಕೇರಿ ಎಂ.ಕೆ.ನಾಯಕ ಕನ್ನಡ ಧ್ವಜ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಟಾರ, ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಮಳಿಗೆಯನ್ನು ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ವ್ಯಂಗ್ಯಚಿತ್ರ ಪ್ರದರ್ಶನ ಮಳಿಗೆಯನ್ನು ನೀರ್ನಳ್ಳಿ ಗಣಪತಿ ಉದ್ಘಾಟಿಸಲಿದ್ದಾರೆ. ವನರಾಗ ಶರ್ಮರ ಬಾಗಿಲಿಲ್ಲದ ಗೋಡೆಯಿಲ್ಲ ಮಕ್ಕಳ ಕಥಾ ಸಂಕಲನವನ್ನು ಕಥೆಗಾರ ಬಿ.ಪಿ. ಶಿವಾನಂದರಾವ್‌, ಡಾ| ಸುರೇಶ್‌ ನಾಯ್ಕ ಸಂಪಾದಿಸಿದ ಶಾಮಿಯಾನ ಕೃತಿಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎನ್‌.ಎಸ್‌. ಹೆಗಡೆ ಕುಂದರಗಿ ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ 2:30ಕ್ಕೆ ತಮ್ಮಣ್ಣ ಬೀಗಾರ ಅಧ್ಯಕ್ಷತೆಯಲ್ಲಿ ಮಕ್ಕಳ ಕಾವ್ಯೋತ್ಸವ ನಡೆಯಲಿದ್ದು ಡಾ| ಶ್ರೀಪಾದ ಭಟ್ಟ ಆಶಯ ನುಡಿ ಆಡಲಿದ್ದಾರೆ. ಈ ಗೋಷ್ಠಿಯಲ್ಲಿ ರಕ್ಷಿತ್‌ ಹರಪನಹಳ್ಳಿ, ದೀಪ್ತಿ ಗೋಪಾಲ ನಾಯ್ಕ, ಎಂ.ಎಸ್‌. ಶೋಬಿತ್‌, ನಿತೀಶ ಚಿದಾನಂದ ಕೋವಿ, ಸಹನಾ ಹೆಗಡೆ, ಗಾಯತ್ರಿ ಗಡಿಗೆಹೊಳೆ, ಶಶಿಧರ ಮಹಾಲೆ, ಶೋಬಿತಾ ಲಕ್ಷ್ಮಣ ನಾಯ್ಕ, ತೇಜಾ ಜಗನ್ನಾಥ ನಾಯ್ಕ, ಸೌಂದರ್ಯ ವಿನೋದ ವೆರ್ಣೇಕರ್‌, ಲಿಖಿತಾ ಗಿರಿಧರ ನಾಯ್ಕ, ಸ್ವಾತಿ ಶಂಕರ ನಾಯ್ಕ, ದಿವ್ಯಾ ಭಾಗವತ, ಮೇಧಾ ಭಟ್ಟ, ದ್ರುವ ನರಸಿಂಹ ಭಟ್ಟ, ಭಾವನಾ ಗಾಂವಕರ, ಪಾವನಿ ಅರ್ಜುನ ಗುರವ, ಕವಿತಾ ಬೋಳಗುಡ್ಡೆ, ಪ್ರೀತಿಕಾ ಮುಂತಾದ ಮಕ್ಕಳು ಕವನ ವಾಚನ ಮಾಡಲಿದ್ದಾರೆ.

ಮಧ್ಯಾಹ್ನ 4.30ಕ್ಕೆ ಕನ್ನಡ, ಕನ್ನಡ ಶಾಲೆ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳು ವಿಷಯದ ಮೇಲೆ 2ನೇ ಗೋಷ್ಠಿ ನಡೆಯಲಿದ್ದು ಟಿ.ಜಿ. ಭಟ್ಟ ಹಾಸಣಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಕೆ.ನಾಯ್ಕ ಹೊಸಳ್ಳಿ ಆಶಯ ಮಾತನಾಡಲಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ಶಾಲೆ ಅನಿವಾರ್ಯ ಈ ವಿಷಯದ ಮೇಲೆ ಪ್ರೊ| ವಿಜಯಾ ನಾಯ್ಕ ಮತ್ತು ಕನ್ನಡ ಶಾಲೆ ಅಳಿವು ಉಳಿವು ವಿಷಯದ ಮೇಲೆ ಶಾರದಾ ಭಟ್ಟ ಮಾತನಾಡಲಿದ್ದಾರೆ. ಸಂವಾದದಲ್ಲಿ ದೀಪಕ ಶೇಣಿÌ, ಸುಭಾಷ್‌ ಧೂಪದಹೊಂಡ, ರಮೇಶ ಹೆಗಡೆ ಕೆರೆಕೋಣ, ಗಣಪತಿ ಹಾಸ್ಪುರ, ಸುಬ್ರಹ್ಮಣ್ಯ ಭಟ್ಟ, ಡಾ| ಸುಚೇತಾ ಮದ್ಗುಣಿ, ರಾಜಶೇಖರ ನಾಯ್ಕ ಮುಂಡಗೋಡ, ಗುರುದತ್ತ ಭಟ್ಟ, ಎಚ್‌.ಬಿ.ನಾಯಕ, ವಿಶ್ವನಾಥ ಭಾಗವತ, ನಾಗರಾಜ ಹುಡೇದ, ನಾರಾಯಣ ಮಧ್ಯಸ್ಥ, ಜಯದೇವ ಬಳಗಂಡಿ, ಎಂ.ಎಂ. ಹೆಗಡೆ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಕವಿಕಾವ್ಯ ಸವಿಗಾನ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರೊ| ಮೋಹನ ಹಬ್ಬು ವಹಿಸಲಿದ್ದು, ಡಾ| ರಾಜು ಹೆಗಡೆ ಆಶಯ ಮಾತನಾಡುವರು. ಸಮ್ಮೇಳನಾಧ್ಯಕ್ಷ ಡಾ| ಝಮೀರುಲ್ಲಾ ಷರೀಫ್‌, ಅರವಿಂದ ಕರ್ಕಿಕೋಡಿ, ಸುಬ್ರಾಯ ಭಟ್ಟ ಬಕ್ಕಳ, ಪ್ರಿಯಾ ಕಲ್ಲಬ್ಬೆ, ಗಣೇಶ ನಾಡೋರ ವಾಚಿಸುವ ಕವನಗಳಿಗೆ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆ ಗಾಯಕ ಉಮೇಶ ಮುಂಡಳ್ಳಿ ಮತ್ತು ಸಂಧ್ಯಾ ಭಟ್ಟ ಹಾಡುವರು.

ಡಿ.23 ರಂದು ಮುಂಜಾನೆ 9:30ಕ್ಕೆ ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಗೀತಾ ವಸಂತ ವಹಿಸಲಿದ್ದು, ಆಶಯ ಭಾಷಣವನ್ನು ಪ್ರಜ್ಞಾ ಮತ್ತಿಹಳ್ಳಿ ಮಾಡಲಿದ್ದಾರೆ. ಜೆ.ಪ್ರಮಾನಂದ, ಶ್ರೀದೇವಿ ಕೆರೆಮನೆ, ಪಲ್ಲವಿ ಕಿರಣ, ರೇಷ್ಮಾ ಎ.ರೆಹೆಮಾನ್‌, ಸ್ಮಿತಾ ಭಟ್ಟ, ಈರಣ್ಣ ರಂಗಾಪುರ, ಪ್ರೇಮಾ ಟಿ.ಎಂ.ಆರ್‌., ಸುಬ್ರಾಯ ಬಿದ್ರೆಮನೆ, ಸುಕನ್ಯಾ ದೇಸಾಯಿ, ಶಿವಲೀಲಾ ಹುಣಸಗಿ, ಶ್ರೀಧರ ಶೇಟ್‌, ಎಂ.ಡಿ. ಪಕ್ಕಿ, ಸುಧಾರಾಣಿ ನಾಯ್ಕ, ಪಿ.ಬಿ.ಗೌಡ, ಸೀತಾ ಹೆಗಡೆ, ಎನ್‌.ವಿ.ನಾಯಕ, ವಿ.ಆರ್‌.ಗೌಡ, ಎಂ.ಜಿ.ತಿಲೋತ್ತಮೆ, ಟಿ.ವಿ.ಕೋಮಾರ, ನರಸಿಂಹ ಹೆಗಡೆ, ಸುರೇಶ ಮುರ್ಡೇಶ್ವರ , ವೇದಾವತಿ ಹೆಗಡೆ, ಎಂ.ಎಸ್‌.ಹೆಗಡೆ ಸಿದ್ದಾಪುರ, ಮಾಸ್ತಿ ಗೌಡ, ನಾಗರಾಜ ಮಂಜುಗುಣಿ, ಗಾಯತ್ರಿ ರಾಘವೇಂದ್ರ, ದತ್ತಾತ್ರೇಯ ಕಣ್ಣೀಪಾಲ, ಲಕ್ಷ್ಮೀ ಹುಲಿದೇವರವಾಡ, ಎಂ.ವಿಠ್ಠಲ  ಅವರಗುಪ್ಪ, ಕವನ ವಾಚನ ಮಾಡಲಿದ್ದಾರೆ.

Advertisement

11ರಿಂದ ಉತ್ತರಕನ್ನಡ: ಸಾಹಿತ್ಯಕ, ಸಾಂಸ್ಕೃತಿಕ ಸವಾಲುಗಳು ವಿಷಯದ ಮೆಲೆ ಗೋಷ್ಠಿ ನಡೆಯಲಿದ್ದು, ಜಯರಾಮ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಸುಬ್ರಾಯ ಮತ್ತಿಹಳ್ಳಿ ಆಶಯನುಡಿ ಆಡಲಿದ್ದಾರೆ. ಹೊಸ ತಲೆಮಾರಿನ ಬರೆಹಗಾರರ ಕುರಿತು ನಾಗಪತಿ ಹೆಗಡೆ, ರಂಗಕರ್ಮಿಗಳ ಸವಾಲುಗಳ ಬಗ್ಗೆ ರಮಾನಂದ ಐನಕೈ, ಜನಪದರುಗಳ ಸವಾಲುಗಳ ಬಗ್ಗೆ ಡಾ| ಸಮಿತಾ ನಾಯಕ, ಪತ್ರಕರ್ತರ ಸವಾಲುಗಳ ಬಗ್ಗೆ ಎಂ.ಜಿ. ನಾಯ್ಕ ಮಾತನಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರ ಹೆಜ್ಜೆ ಗುರುತು -ಸಂವಾದ ನಡೆಯಲಿದ್ದು ಶಾಂತಾರಾಮ ನಾಯಕ ಹಿಚಕಡ ಅಧ್ಯಕ್ಷತೆ ವಹಿಸಲಿದ್ದು, ಷರೀಫರ ಕಥೆಗಳ ಕುರಿತು ಡಾ| ಸುರೇಶ ನಾಯ್ಕ, ಷರೀಫರ ವಿಮರ್ಷೆ ಕುರಿತು ಮಹೇಶ ನಾಯಕ ಹಿಚ್ಕಡ, ರೇಷ್ಮಾ ಉಮೇಶ ಮಾತನಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಜಿ.ಆರ್‌.ಹೆಗಡೆ ಕುಂಬ್ರಿಗುಡ್ಡೆ, ದೇವಿದಾಸ ಮೊಗೇರ, ಆರ್‌.ಎಸ್‌.ನಾಯಕ, ಶ್ರೀರಂಗ ಕಟ್ಟಿ, ನಾರಾಯಣ ಮಧ್ಯಸ್ಥ, ಪಾಂಡುರಂಗ, ಶಂಕರ ನಾಯ್ಕ ಶಿರಾಲಿ, ರಾಮಕೃಷ್ಣ ಭಟ್ಟ, ಭವಾನಿಶಂಕರ ನಾಯ್ಕ, ಮಹೇಶ ನಾಯ್ಕ, ಡಾ| ಪ್ರಕಾಶ ನಾಯಕ, ವಿಷ್ಣು ನಾಯಕ ಪಾಲ್ಗೊಳ್ಳುವರು.

3:30ಕ್ಕೆ ಬಹಿರಂಗ ಅಧಿವೇಶನ ಮತ್ತು ಸಾಧನೆಗಾಗಿ ಸನ್ಮಾನ ನಡೆಯಲಿದ್ದು ಅರುಣಕುಕಮಾರ ಹಬ್ಬು ಅಧ್ಯಕ್ಷತೆ ವಹಿಸಲಿದ್ದಾರೆ. ಬೀರಣ್ಣ ನಾಯಕ ಅಭಿನಂದನಪರ ಮಾತನಾಡಲಿದ್ದಾರೆ. ಸಮ್ಮೇಳನದ ನಿರ್ಣಯ ಮಂಡನೆ ನಾಗರಾಜ ಹೆಗಡೆ ಕುಮಟಾ ಮಾಡಲಿದ್ದಾರೆ. ಆರ್‌.ಡಿ. ಹೆಗಡೆ ಆಲ್ಮನೆ, ವಸುಧಾ ಹೆಗಡೆ ಯಲ್ಲಾಪುರ, ಡಾ|ದತ್ತಾತ್ರಯ ಗಾಂವಕರ, ಅಝೀಂ ಅಂಬಾರಿ, ಆರ್‌.ಕೆ.ಬಾಲಚಂದ್ರ, ಗೋಪಾಲಕೃಷ್ಣ ಹೆಗಡೆ ಕಲಬಾಗ, ಮೋಹನ ನಾಯ್ಕ ಅಂಕೋಲಾ, ಯಮುನಾ ನಾಯ್ಕ ಕುಂದರಗಿ, ಅಪ್ಪಿಗೋಣ ವೆಳಿಪ್‌, ಎಸ್‌.ಬಿ.ಹೂಗಾರ, ಮಂಜುಸುತ ಜಲವಳ್ಳಿ, ಪ್ರಕಾಶ ಕುಂಜಿ, ನಝೀರ್‌ ಶೇಖ್‌, ವಿದ್ಯಾಧರ ಗುಳಗುಳಿ, ನಾಗೇಶ ಭಟ್ಟ, ಆರ್‌. ಕೆ.ಹೊನ್ನೆಗುಂಡಿ ಅವರನ್ನು 
 ನ್ಮಾನಿಸಲಾಗುವುದು.

ಸಂಜೆ 5 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ನವದೆಹಲಿಯ ಜೆ.ಎನ್‌.ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ|ಪುರುಷೋತ್ತಮ ಬಿಳಿಮಲೆ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಆಕಾಶವಾಣಿ ಧಾರವಾಡದ ಕಾರ್ಯಕ್ರಮ ಸಂಯೋಜಕ ಬಸು ಬೇವಿನಗಿಡದ, ಶಾಂತಿಕಾ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ವಿ. ನಾಯಕ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಪಾಲ್ಗೊಳ್ಳವರು. ಸಮ್ಮೇಳನದ ಎರಡು ದಿನವೂ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ಡಿ.22 ರಂದು ರಾತ್ರಿ 7:30ಕ್ಕೆ ಹೊನ್ನಾವರ ತಾಲೂಕಿನ ಚಿತ್ತಾರ ಸರಕಾರಿ ಪ್ರೌಢಶಾಲಾ ಮಕ್ಕಳಿಂದ ರಾಣಿ ಅಬ್ಬಕ್ಕ ನಾಟಕ ಮತ್ತು ನಾರಾಯಣ ಶಾಸ್ತ್ರಿಯವರ ನಿರೂಪಣೆಯಲ್ಲಿ ಪ್ರದರ್ಶನವಾಗಲಿದೆ. ಶಿವಾನಂದ ಭಟ್ಟರ ನಾದಸಿರಿ, ಸತೀಶ ಯಲ್ಲಾಪುರ ಅವರ ಕುಂಚಗರಿ ಇರುವುದು. ಅನಂತರ ಇನ್ನಿತರ ಮನರಂಜನಾ ಕಾರ್ಯಕ್ರಮ ಇರುವುದು. ಡಿ.23 ರಂದು ಸಂಜೆ 6:30 ರಿಂದ ಯಲ್ಲಾಪುರದ ಶ್ರೀಗುರು ಜನಪದ ಕಲಾ ತಂಡದವರಿಂದ ಭಾವೈಕ್ಯ ಸಾರುವ ಜನಪದ ಗೀತೆಗಳ ಪ್ರಸ್ತುತಿ ನಡೆಯಲಿದೆ. ಅನಂತರ ಹಿತ್ಲಳ್ಳಿ ಶಾಲಾ ಮಕ್ಕಳಿಂದ ಲವಕುಶ ಪ್ರಸಂಗದ ಯಕ್ಷಗಾನ ಹಾಗೂ ಇನ್ನಿತರ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next