ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಹಿತ ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಚಳಿ ಪ್ರಮಾಣ ತೀವ್ರ ಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನಗಳ ವರೆಗೆ ಪ್ರತಿಕೂಲ ಹವಾಮಾನದ ಪರಿಸ್ಥಿತಿ ಮುಂದುವರಿಯಲಿದೆ. ದಟ್ಟವಾಗಿ ಮಂಜು ಮುಸುಕಿದ ವಾತಾವರಣವೂ ಇರಲಿದೆ.
ಹೊಸದಿಲ್ಲಿಯಲ್ಲಿ ತಾಪಮಾನ 10 ಡಿ.ಸೆ.ಗೆ ಇಳಿದಿದೆ. ದಟ್ಟ ಮಂಜುಕವಿದ ಕಾರಣದಿಂದ 50 ಮೀಟರ್‌ನಿಂದ ಆಚೆಗೆ ಇರುವ ವಸ್ತು ಮತ್ತು ದಾರಿ ಕಾಣದೇ ಇರುವ ಸ್ಥಿತಿ ಇದೆ. ಹೀಗಾಗಿ ಹೊಸ ದಿಲ್ಲಿ ಯಿಂದ ತೆರಳುವ ಹಲವು ರೈಲುಗಳು ವಿಳಂಬವಾಗಿ ಪ್ರಯಾಣಿಸುತ್ತಿವೆ.
ಹರಿಯಾಣದ ಹಿಸ್ಸಾರ್‌ನಲ್ಲಿ ಕನಿಷ್ಠ ತಾಪಮಾನ 2.5 ಡಿ.ಸೆ. ದಾಖಲಾಗಿದೆ. ಅಂಬಾಲಾದಲ್ಲಿ 7.7 ಡಿ.ಸೆ., ಕರ್ನಾಲ್‌ನಲ್ಲಿ 6.8 ಡಿ.ಸೆ. ತಾಪಮಾನ ದಾಖಲಾಗಿದೆ.
ರಾಜಸ್ಥಾನದಲ್ಲಿ ಕೂಡ ಚಳಿಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಫತೇಪುರ್‌ನಲ್ಲಿ ಭಾರೀ ಪ್ರಮಾಣದಲ್ಲಿ ತಾಪಮಾನ ಕುಸಿತ ಗೊಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ 16 ಡಿ.ಸೆ.ನಿಂದ 25 ಡಿ.ಸೆ. ವರೆಗೆ ತಾಪಮಾನ ಇದೆ.
ಪಂಜಾಬ್‌ನ ಹಲವು ಭಾಗಗಳಲ್ಲಿಯೂ ಶೀತ ಹವೆ ಯಿಂದ ಜನಜೀವನಕ್ಕೆ ಧಕ್ಕೆ ಉಂಟಾಗಿದೆ. ಅಮೃತ ಸರದಲ್ಲಿ 6.5 ಡಿ.ಸೆ., ಲುಧಿಯಾನಾದಲ್ಲಿ 6 ಡಿ.ಸೆ. ತಾಪಮಾನ ದಾಖಲಾಗಿದೆ.