Advertisement
ಎಪ್ರಿಲ್ ತಿಂಗಳಿನಿಂದ ಜೂನ್ ತನಕ 2017ನೇ ಸಾಲಿನಲ್ಲಿ ಒಟ್ಟು ಸರಾಸರಿ 1526.25 ಮಿ.ಮೀ. ಮಳೆಯಾದರೆ 2018ನೇ ಸಾಲಿನಲ್ಲಿ ಒಟ್ಟು ಸರಾಸರಿ 1593.14 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಇದುವರೆಗೆ 66.89 ಮಿ.ಮೀ. ಸರಾಸರಿ ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆಯಾಗಿದ್ದರೆ ಈ ವರ್ಷ ಮೇ ಹಾಗೂ ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಸರಾಸರಿ ಮಳೆಯಾಗಿದೆ. ಪುತ್ತೂರು ತಾಲೂಕಿನಾದ್ಯಂತ ಜೂ. 22 ಆರಿದ್ರಾ ನಕ್ಷತ್ರ ಆರಂಭಗೊಂಡ ಬಳಿಕ 10 ದಿನಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಮಳೆಯ ನಕ್ಷತ್ರಗಳಾದ ಪುನರ್ವಸು ಹಾಗೂ ಪುಷ್ಯಾ ನಕ್ಷತ್ರಗಳ ಅವಧಿಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಕಳೆದ 48 ಗಂಟೆಗಳ ಅವಧಿಯಲ್ಲಿ ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಕೆ ಕಂಡಿದೆ. ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರದಲ್ಲಿ 5.6 ಮಿ.ಮೀ., ಉಪ್ಪಿನಂಗಡಿಯಲ್ಲಿ 8 ಮಿ.ಮೀ., ಶಿರಾಡಿಯಲ್ಲಿ 4.3 ಮಿ.ಮೀ., ಕೊçಲದಲ್ಲಿ 15.4 ಮಿ.ಮೀ., ಐತೂರುನಲ್ಲಿ 8.4 ಮಿ.ಮೀ., ಕಡಬದಲ್ಲಿ 5.2 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು ಸರಾಸರಿ 19 ಮಿ.ಮೀ. ಮಳೆಯಾಗಿದೆ. ನೇತ್ರಾವತಿ ಕುಮಾರಧಾರಾ ಸಂಗಮದ ಸ್ಥಳದಲ್ಲಿ ನೀರಿನ ಮಟ್ಟ ಇಳಿಕೆ ಕಂಡಿದೆ.