Advertisement

Mansoon: ದೇಶಕ್ಕೆ ಸಾಮಾನ್ಯ ಮುಂಗಾರು…ಭಾರತೀಯ ಹವಾಮಾನ ಇಲಾಖೆ ಮಾಹಿತಿ

11:35 PM Apr 11, 2023 | sudhir |

ಹೊಸದಿಲ್ಲಿ: ಎಲ್‌ ನಿನೋ ಸವಾಲು ಇದ್ದರೂ, ದೇಶಕ್ಕೆ ಪ್ರಸಕ್ತ ವರ್ಷ ಸಾಮಾನ್ಯ ಮುಂಗಾರು ಲಭಿಸಲಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ. ದೇಶದ ಕೃಷಿ ಕ್ಷೇತ್ರ ಮುಂಗಾರು ಮಳೆಯನ್ನೇ ಅವಲಂಬಿಸಿ ಕೊಂಡಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಈ ವರದಿ ಮಹತ್ವ ಪಡೆದಿದೆ.

Advertisement

ಈ ಬಾರಿ ದೇಶದಲ್ಲಿ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ವರದಿ ಮಾಡಿದ ಬೆನ್ನಲ್ಲೇ ಅದಕ್ಕೆ ತದ್ವಿರುದ್ಧವಾದ ಭವಿಷ್ಯವನ್ನು ಹವಾಮಾನ ಇಲಾಖೆ ನುಡಿದಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದ್ದು, ಜೂನ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿ ಒಟ್ಟಾರೆ ಶೇ.96ರಷ್ಟು ಮಳೆಯಾಗುವ ಸಾಧ್ಯತೆ ಇದೆ. 4 ತಿಂಗಳ ಮುಂಗಾರು ಹಂಗಾಮಿನಲ್ಲಿ ಶೇ.87 ಮಳೆಯಾಗಲಿದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next