ನವದೆಹಲಿ:ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಭಾರತವನ್ನು ಆಟಿಕೆ ತಯಾರಿಕೆಯ ಪ್ರಮುಖ ಕೇಂದ್ರವನ್ನಾಗಿ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಟಿಕೆಗಳ ಆಮದು ಮಾಡಿಕೊಳ್ಳಲು ಪರವಾನಿಗೆ ಕಡ್ಡಾಯ ಮಾಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಅಧಿಕಾರಿಗಳ ಮೂಲಗಳ ಪ್ರಕಾರ, ದೇಶೀಯ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಿ, ವಿದೇಶಿ ಆಟಿಕೆ ಸಾಮಾನುಗಳ ಉತ್ಪನ್ನಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿರುವುದಾಗಿ ವಿವರಿಸಿದೆ. ಮುಂಬರುವ ವರ್ಷ 2022ರ ಮಾರ್ಚ್ ತಿಂಗಳಿನಿಂದ ಸುಂಕರಹಿತ ಆಟಿಕೆಗಳನ್ನು ಆಮದು ಮಾಡಿಕೊಳ್ಳಲು ಲೈಸೆನ್ಸ್ ಕಡ್ಡಾಯ ಎಂಬ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ಮೊದಲ ಆದ್ಯತೆ ಮೇಕ್ ಇಂಡಿಯಾ (ಆತ್ಮನಿರ್ಭರ್)ಕ್ಕೆ ಅಥವಾ ದೇಶಿ ಆಟಿಕೆಗಳ ತಯಾರಿಕೆಗೆ ಆದ್ಯತೆ ಕೊಡಲಾಗುವುದು ಎಂದು ಹೇಳಿದೆ. ಉತ್ತಮ ದರ್ಜೆಯ ದೇಶೀಯ ಆಟಿಕೆಗಳನ್ನು ತಯಾರಿಸುವ ಮೂಲಕ ಜನರಿಗೂ ಮನದಟ್ಟು ಮಾಡಿಕೊಡಬೇಕಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಬಿಡುವಿಲ್ಲದ ಚುನಾವಣಾ ಪ್ರಚಾರ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿಗೆ ಕೋವಿಡ್ 19 ದೃಢ
ಇತ್ತೀಚೆಗಷ್ಟೇ ಕೈಗಾರಿಕಾ ಕ್ಷೇತ್ರ ಕ್ವಾಲಿಟಿ ಕಂಟ್ರೋಲ್ ಆದೇಶವನ್ನು ಹೊರಡಿಸಿತ್ತು. ಸುಂಕ ರಹಿತ ನಿರ್ಬಂಧ ಜಾರಿಯಲ್ಲಿದ್ದರೂ ಕೂಡಾ ಜನವರಿಯಲ್ಲಿ ಕ್ವಾಲಿಟಿ ಕಂಟ್ರೋಲ್ ಆದೇಶ ಜಾರಿಗೆ ಬರುವ ಮುನ್ನವೇ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಲು ಮುಂದಾಗುವುದಿಲ್ಲ ಎಂದು ತಿಳಿಸಿದೆ. ಯಾಕೆಂದರೆ ದೇಶೀಯ ಕೈಗಾರಿಕೆ ಉತ್ತಮ ದರ್ಜೆಯಲ್ಲಿ ಗುರಿ ಸಾಧಿಸಬೇಕು. ಜನರಿಗೂ ಇದರ ಬಗ್ಗೆ ತಿಳಿಯಬೇಕು ಎಂದು ಹೇಳಿದೆ.
ದೇಶೀಯ ಆಟಿಕೆ ತಯಾರಿಕೆಗಾರರು ಹೊಸ ಮಾನದಂಡವನ್ನು ಅಳವಡಿಸಿಕೊಳ್ಳಲು ಜನವರಿ 1ರವರೆಗೆ ಅಂತಿಮ ಗಡುವು ವಿಸ್ತರಿಸಲಾಗಿತ್ತು ಎಂದು ವರದಿ ತಿಳಿಸಿದೆ.