ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ವನ್ಯಜೀವಿಗಳ ಉಪಟಳ ಮುಂದುವರೆದಿದ್ದು, ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಕಡೆಮನುಗನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಾಟಿ ಮಾಡಿರುವ ಭತ್ತದ ಗದ್ದೆಗಳಿಗೆ ರಾತ್ರಿ ವೇಳೆ ಲಗ್ಗೆ ಇಟ್ಟು ಬೆಳೆಯನ್ನು ತುಳಿದು ನಾಶಪಡಿಸಿವೆ.
ತಾಲೂಕಿನ ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾಮದ ಅಮಾಸೇಗೌಡ, ಬೋರೇಗೌಡ, ಶಿವು, ರಮೇಶ್‌ರವರ ಗದ್ದೆಯಲ್ಲಿ ಭತ್ತದ ಗದ್ದೆಯಲ್ಲಿ ಕಾಡಾನೆಗಳು ಓಡಾಡಿದ್ದರಿಂದ ನಾಟಿ ಮಾಡಿದ್ದ ಭತ್ತದ ಪೈರು ನಾಶವಾಗಿದೆ.
ಕಡೇಮನುಗನಹಳ್ಳಿ ಗ್ರಾಮದ ಬಳಿಯ ಕಿಕ್ಕಿರಿಕಟ್ಟೆಯ ಕಲ್ಲುಗುಂಡಿ, ಆಲದಮರದ ಕಂಡಿ ಅರಣ್ಯ ಭಾಗದಿಂದ ರಾತ್ರಿ ವೇಳೆ ಹೊರದಾಟುವ ಕಾಡಾನೆಗಳು ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆ ತಿಂದು-ತುಳಿದು ನಾಶ ಪಡಿಸುತ್ತಿವೆ.
ಹಿಂದೆಲ್ಲಾ ಜಮೀನಿನ ಮರಗಳಲ್ಲಿ ಅಟ್ಟಣೆ ನಿರ್ಮಿಸಿಕೊಂಡು ರೈತರು ಕಾವಲು ಸ್ಥಳಕ್ಕೆ ಹುಣಸೂರು ವನ್ಯಜೀವಿ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮಹಜರ್ ನಡೆಸಿದರು.ಕಾದು ಬೆಳೆ ಉಳಿಸಿಕೊಳ್ಳುತ್ತಿದ್ದರು, ಕಳೆದ ಫೆಬ್ರವರಿಯಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ ಮತ್ತೊಂದೆಡೆ ಹುಲಿ, ಚಿರತೆ ಕಾಟವೂ ಹೆಚ್ಚಿದ್ದು ರೈತರು ಕಾವಲು ಕಾಯಲಾಗದ ಸ್ಥಿತಿ ಇದೆ.
ಕಿಕ್ಕೇರಿಕಟ್ಟೆ ಮಾರ್ಗವಾಗಿ ರೈಲ್ವೆ ಕಂಬಿ ತಡೆ ಬೇಲಿ ನಿರ್ಮಾಣ ಕಾಮಗಾರಿ ವಿಳಂಬ ವಾಗಿದ್ದು ಕೂಡಲೆ ಕಾಮಗಾರಿ ಪ್ರಾರಂಭಿಸಬೇಕು. ಬೆಳೆ ನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರವನ್ನು ಶೀಘ್ರ ನೀಡಬೇಕು, ಆನೆ ಹಾವಳಿ ನಿಯಂತ್ರಿಸಲು ತಾತ್ಕಾಲಿಕವಾಗಿ ರಾತ್ರಿ ಕಾವಲು ಪಡೆ ನೇಮಿಸಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.