Advertisement
ಕ್ಯಾಲಿಫೋರ್ನಿಯಾದಲ್ಲಿರುವ ಅಶ್ವಿನಿ ಸುಬ್ಬನ್ ಅವರು ರಾಜ್ಯದ ವಿವಿಧೆಡೆಯ ನೇಕಾರರಿಗೆ ನೆರವಾಗಲು ದೀಪಕ್ ಸಾರೊದೆ ಅವರ ಮೂಲಕ ವಾಟ್ಸಾéಪ್ ಗ್ರೂಪ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆಯ ನೇಕಾರರು ಸೀರೆ ಖರೀದಿಸಿ ಪ್ರೋತ್ಸಾಹಿಸುವಂತೆ ಹೇಳಿದ್ದು, ಅದರಂತೆ ಇಳಕಲ್ ಸೀರೆಗಳನ್ನು ನೇರ ಖರೀದಿಸಲು ಚಿಂತಿಸಲಾಗಿತ್ತು. ವಿದೇಶದಲ್ಲಿರುವ ತೃಪ್ತಿ ಡಿ. ಸಾಲಿಮs… ಅವರು ಭಾರತೀಯ ಸಿನಿ ತಾರೆಯರನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿದ್ದು, ಅಮೆರಿಕ, ಫ್ರಾನ್ಸ್, ಇಟಲಿ, ಜರ್ಮನಿ ಮುಂತಾದೆಡೆಗಳಿಂದ ಇಳಕಲ್ ಸೀರೆಗೆ ಬೇಡಿಕೆ ಬಂದಿದೆ. 850 ರೂ.ಗಳಿಂದ 12 ಸಾವಿರ ರೂ.ವರೆಗಿನ ಮೌಲ್ಯದ ಸುಮಾರು 6 ಲಕ್ಷ ರೂ.ಗಳ ಸೀರೆ ನೇರ ಖರೀದಿ ಮಾಡಲಾಗಿದೆ.
ಇಳಕಲ್ ಅನಂತರ ಈಗ ಉಡುಪಿಯ ನೇಕಾರರು ನೇಯ್ದ ಸೀರೆಗಳ ನೇರ ಖರೀದಿಗೆ ಪ್ರಚಾರ ಆರಂಭವಾಗಿದೆ. ಇದು ಕೈಮಗ್ಗವನ್ನು ಪ್ರೋತ್ಸಾಹಿಸುವ ಜತೆಗೆ ಅನೇಕ ಕುಟುಂಬಗಳಿಗೂ ನೆರವಾದಂತೆ ಆಗುತ್ತದೆ. ಕೈಮಗ್ಗದಿಂದ ತಯಾರಿಸಿದ ಸಿಲ್ಕ್, ಕಾಟನ್, ಕಾಟನ್ ಮಿಕ್ಸ್‌ಡ್ ಸಿಲ್ಕ್ ಸೀರೆಗಳನ್ನು ಈಗ ವಿದೇಶದಲ್ಲಿ ಜನ ಹೆಚ್ಚು ಬಳಸಲು ಈ ಮೂಲಕ ಸಾಧ್ಯವಾಗಿದೆ.
3 ವರ್ಷಗಳ ಹಿಂದೆ 60 ವಯಸ್ಸು ಮೀರಿದ 42 ನೇಕಾರರು ಮಾತ್ರ ಕೈಮಗ್ಗ ತಯಾರಿಸುತ್ತಿದ್ದರು. 25 ವರ್ಷಗಳಿಂದ ಮಗ್ಗ ನೇಯ್ಗೆ ಕಲಿಯುತ್ತಿರಲಿಲ್ಲ. ಈಗ ಉಡುಪಿಯಲ್ಲಿ 60 ಮಂದಿ ಕೈಮಗ್ಗ ತಯಾರಕರಿದ್ದು 10 ಮಂದಿಗೆ ಈಚೆಗಷ್ಟೇ ನಮ್ಮ ಸಂಸ್ಥೆ ಮೂಲಕ ತರಬೇತಿ ನೀಡಲಾಗಿದೆ. 20 ವರ್ಷಗಳ ಅನಂತರ ಕೈಮಗ್ಗ ತಯಾರಿ ಕ್ಷೇತ್ರಕ್ಕೆ ಮರಳಿದವರೂ ಇದ್ದಾರೆ. ಕಿನ್ನಿಗೋಳಿಯಲ್ಲಿ ನೇಯುವವರ ಸಂಖ್ಯೆ 8 ಇದ್ದಲ್ಲಿ 24ಕ್ಕೆ ಏರಿಕೆಯಾಗಿದೆ. ಪ್ರೋತ್ಸಾಹ ದೊರೆತಂತೆಯೇ ಕೈಮಗ್ಗ ನೇಯುವವರ ಸಂಖ್ಯೆಯೂ ಹೆಚ್ಚಬೇಕು. -ಮಮತಾ ರೈ, ಕದಿಕೆ ಟ್ರಸ್ಟ್ ಅಧ್ಯಕ್ಷೆ, ಉಡುಪಿ