Advertisement
ಗ್ರಾಮದಲ್ಲಿ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಚರಂತಿಮಠ, ಹಲವಾರು ರಾಜಕಾರಣಿಗಳನ್ನು ಆರಿಸಿ ತಂದಿದ್ದೀರಿ. ಆದರೆ, ಗೆದ್ದವರು ಕ್ಷೇತ್ರ ಹಾಗೂ ಜನರಿಗಾಗಿ ಸೇವೆ ನೀಡುವುದು ಬಿಟ್ಟು ಸ್ವಾರ್ಥ ರಾಜಕೀಯ ಮಾಡಿದ್ದಾರೆ. ಇದೆಲ್ಲ ಮನಗಂಡ ಮತದಾರರು ಈ ಬಾರಿ ಬದಲಾವಣೆಗೆ ಮುಂದಾಗಿದ್ದು, ಸ್ವಾಭಿಮಾನಿ ಆಟೋರಿಕ್ಷಾ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
Related Articles
Advertisement
ಅಭಿವೃದ್ಧಿಗಾಗಿ ಆಟೋರಿಕ್ಷಾ ಬೆಂಬಲಿಸಿ
ಬಾಗಲಕೋಟೆ: ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇಲ್ಲದ ನಾಯಕನಿಂದ ಬಾಗಲಕೋಟೆ ಕ್ಷೇತ್ರ ಉದ್ಯೋಗ ಸೃಷ್ಟಿ ಸೇರಿ ವಿವಿಧ ಕಾರ್ಯಗಳಿಲ್ಲದೇ ಸಂಪೂರ್ಣ ಹಿಂದುಳಿದಿದೆ. ಹಾಗಾಗಿ ಈ ಬಾರಿ ಆಟೋರಿಕ್ಷಾ ಚಿಹ್ನೆಗೆ ಮತ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮನವಿ ಮಾಡಿದರು.
ವಿದ್ಯಾಗಿರಿಯ ರೂಪಲ್ಯಾಂಡ್, ಕೆಎಚ್‌ಬಿ ಕಾಲೋನಿ, ಬಸವ ನಗರದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು. ಬಾಗಲಕೋಟೆ ಕ್ಷೇತ್ರ ಉತ್ತರ ಕರ್ನಾಟಕದಲ್ಲೇ ಸೌಹಾರ್ದಯುತ ಹಾಗೂ ಮಾದರಿ ಕ್ಷೇತ್ರವಾಗಿ ನಿರ್ಮಿಸಲು ಸ್ವಾಭಿಮಾನಿ ಕಾರ್ಯಕರ್ತರು ಸಜ್ಜಾಗಿದ್ದು, ಇದಕ್ಕೆ ಕ್ಷೇತ್ರದ ಜನರ ಬೆಂಬಲ ಬೇಕಿದೆ. 3 ಬಾರಿ ಕ್ಷೇತ್ರಕ್ಕೆ ನಾಯಕರಾಗಿ ಆಯ್ಕೆ ಮಾಡಿದರೂ ಆಗದ ಅಭಿವೃದ್ಧಿ ಮರಳಿ ಅವರಿಗೆ ಆರಿಸಿ ತರುವುದರಿಂದ ಆಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಚಿಂತನೆಯ ಸ್ವಾಭಿಮಾನಿ ಕಾರ್ಯಕರ್ತರಿಗೆ ಮತದಾರರು ಅವಕಾಶ ನೀಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಇಲ್ಲದ ಕ್ಷೇತ್ರದ ನಾಯಕನನ್ನಾಗಿ ಆರಿಸಿ ತಂದು ನಮ್ಮ ಕಾಲುಗಳ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗಿದೆ. ಈ ಬಾರಿ ಊರೇ ಒಂದಾಗಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹಳ್ಳಿಗಳಲ್ಲಿ ಜನ ಮಾತನಾಡುತ್ತಿದ್ದಾರೆ. ಸ್ವಾಭಿಮಾನಿಗಳಿಗೆ ಬೆಂಬಲ ನೀಡಿ ಸ್ವಾಭಿಮಾನಿಗಳ ಕ್ಷೇತ್ರವಾಗಿ ನಿರ್ಮಾಣ ಮಾಡೋಣ ಎಂದು ಧೈರ್ಯ ನೀಡುತ್ತಿದ್ದಾರೆ ಎಂದರು.
ಈ ವೇಳೆ ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವೀರೇಶ ಹಿರೇಮಠ, ಚರಣ ಜಾಧವ, ವಿಠ್ಠಲ ಕಾಳಬರ, ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಇತರರಿದ್ದರು.
ಜನ ನಾಯಕನಾದವನು ತಳಮಟ್ಟದ ಜನರೊಂದಿಗೆ ಬೆರೆತು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆಗಲೇ ಉತ್ತಮ ನಾಯಕನಾಗಲು ಸಾಧ್ಯ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿ ಗಳು, ಜನರನ್ನೇ ಭಯದಲ್ಲಿರುವಂತೆ ಮಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಈ ಬಾರಿ ಸರಿಯಾದ ಉತ್ತರ ಕೊಡಲು ಬಾಗಲಕೋಟೆ ಜನತೆ ಸಜ್ಜಾಗಿದ್ದಾರೆ. –ಮಲ್ಲಿಕಾರ್ಜುನ ಚರಂತಿಮಠ