ಕುಣಿಗಲ್: ಕುಣಿಗಲ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಡಿ.ನಾಗರಾಜಯ್ಯ ಹಾಗೂ ಅವರ ಪುತ್ರ ಜಿಪಂ ಮಾಜಿ ಅಧ್ಯಕ್ಷ ಡಾ.ಬಿ.ಎನ್.ರವಿ ಅವರು ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮೂಲಕ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ತೆರಳಿ ಬುಧವಾರ ಪ್ರತ್ಯೇಕ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಶ್ರೀ ಕ್ಷೇತ್ರ ಎಡಿಯೂರು ಸಿದ್ದಲಿಂಗೇಶ್ವರಸ್ವಾಮಿ, ಪಟ್ಟಣದ ಗ್ರಾಮದೇವತೆಗೆ ಪೂಜೆ ಸಲ್ಲಿಸಿದರು. ಬಳಿಕ ಮಾಜಿ ಸಚಿವ ಡಿ.ನಾಗರಾಜಯ್ಯ, ಡಾ.ರವಿ ಅವರು ಅಪಾರ ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೆಸ್ಕಾಂ ಕಚೇರಿವರೆಗೆ ಬಂದರು, ಬಳಿಕ ತಂದೆ ಮಗ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಚುನಾವಣಾ ಕಾರಿ ಕೆ.ಎಚ್.ರವಿ ಅವರಿಗೆ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದರು.
ತಲೆ ಸುತ್ತಿ ಕುಸಿದು ಬಿದ್ದ ಜೆಡಿಎಸ್ ಅಧ್ಯಕ್ಷ: ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಇಲ್ಲಿನ ಬೆಸ್ಕಾಂ ಕಚೇರಿ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಸಿಲಿನ ತಾಪಮಾನಕ್ಕೆ ತಲೆಸುತ್ತಿ ಕುಸಿದು ಬಿದ್ದರು. ತಕ್ಷಣ ಜೆಡಿಎಸ್ ಅಭ್ಯರ್ಥಿ ಡಾ.ರವಿ ಮತ್ತಿತರರು ತಂಪು ಪಾನೀಯ ಹಾಗೂ ನೀರನ್ನು ಜಗದೀಶ್ ಅವರಿಗೆ ಕುಡಿಸಿ ಗಾಳಿ ಬೀಸಿದರು, ಬಳಿಕ 10 ನಿಮಿಷದ ಬಳಿಕ ಮತ್ತೆ ಜಗದೀಶ್ ಭಾಷಣ ಮುಂದು ವರಿಸಿದರು.
ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮ ಜನರಿಗೆ ಉಪಯುಕ್ತವಾಗಿದೆ. ಹೀಗಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಿರೀಕ್ಷೆಯಂತೆ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ನಾಗರಾಜಯ್ಯ ಅವರ ಕುಟುಂಬ ಸ್ಥರು ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಡಾ.ಬಿ.ಎನ್. ರವಿ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಟಿಕೆಟ್ ಅವರಿಗೆ ಕೊಡುವಂತೆ ವರಿಷ್ಠರಲ್ಲಿ ಮನವಿ ಮಾಡಿ ದ್ದಾರೆ, ಹೆ„ಕಮಾಂಡ್ ಇದರ ಘೋಷಣೆ ಮಾಡು ವುದು ಬಾಕಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪುರಸಭಾ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್, ಆಯಿಷಾಬಿ, ಜಿ.ಪಂ ಮಾಜಿ ಸದಸ್ಯ ಕೆ.ಎಚ್.ಶಿವಣ್ಣ. ಎನ್.ಆರ್.ಲಕ್ಷ್ಮೀ ನಾರಾಯಣ, ತಾಪಂ ಮಾಜಿ ಸದಸ್ಯ ಜಿಯಾಉಲ್ಲಾ, ಮುಖಂಡ ಕೆ.ಆರ್.ಗುರುಪ್ರಸಾದ್ ಇತರರಿದ್ದರು.