Advertisement

ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

12:10 PM Mar 24, 2021 | Team Udayavani |

ಮಸ್ಕಿ ( ರಾಯಚೂರು): ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ  ಬಿಜೆಪಿ ಅಭ್ಯರ್ಥಿ  ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸಾಂಕೇತಿಕವಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.

Advertisement

ಅಂಕಲಿಮಠ,‌ ಮಸ್ಕಿಯ ಗಚ್ಚಿನಮಠದಲ್ಲಿ ದರ್ಶನ ಪಡೆದು ಮಸ್ಕಿ ಬಿಜೆಪಿ ಕಚೇರಿ ಮೂಲಕ ಆಗಮಿಸಿದ ಬಿಜೆಪಿ ಮುಖಂಡರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿನ ಚುನಾವಣಾ ಅಧಿಕಾರಿ ರಾಜಶೇಖರ ಡಂಬಳ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ:ಶಾಖೆಯ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯ: ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ

ನಾಮಪತ್ರ ಸಲ್ಲಿಕೆ ವೇಳೆ ಕೇವಲ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಪುತ್ರರು ಸೇರಿ ಬಿಜೆಪಿ ಮುಖಂಡರು ತಾ.ಪಂ ಕಚೇರಿ ಮುಂಭಾಗದಲ್ಲಿಯೇ ಕೆಲ ಹೊತ್ತು ಕಾದು ನಿಂತಿದ್ದ ದೃಷ್ಯ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next