ಮಳವಳ್ಳಿ: ಸೆ.30ರಂದು ನಡೆಯಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಕಾಂಗ್ರೆಸ್ ಬೆಂಬ ಲಿತ ಅಭ್ಯರ್ಥಿಗಳಾಗಿ “ಎ’ ದರ್ಜೆ ವಿಭಾಗದಿಂದ ಹಿಟ್ಟನಹಳ್ಳಿ ಎಚ್.ಬಿ.ಬಸವೇಶ್, ಚೊಟ್ಟನಹಳ್ಳಿ ಬಸವರಾಜು,ಕಲ್ಕುಣಿ ಕೆ.ಜೆ. ದೇವರಾಜು, ಉಪ್ಪನಹಳ್ಳಿ ಸುಂದ್ರಪ್ಪ, ಕೆಂಬೂತಗೆರೆ ದ್ಯಾಪೇ ಗೌಡ, ಮೋಳೆದೊಡ್ಡಿ ಲಿಂಗರಾಜು ಹಾಗೂ “ಬಿ’ ದರ್ಜೆ ವಿಭಾಗ ದಿಂದ ಕಿರುಗಾವಲು ಕ್ಷೇತ್ರದಿಂದ ತಳಗವಾದಿ ಚೌಡಯ್ಯ, ಶಕುಂತಲಾ ಮಲ್ಲಿಕ್, ಕಾಗೇಪುರ ಪ್ರಕಾಶ್, ಕಸಬಾ ಕ್ಷೇತ್ರದಿಂದ ಕಂದೇಗಾಲ ಕುಳ್ಳಚೆನ್ನಯ್ಯ, ವಡ್ಡರಹಳ್ಳಿ ಸವಿತ, ಬಿಜಿಪುರ ಕ್ಷೇತ್ರದಿಂದಕುಮಾರ್ ನಾಮಪತ್ರ ಸಲ್ಲಿಸಿದರು.
ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಸುಂದರ್‌ರಾಜ್ ಮಾತನಾಡಿ, ಟಿಎಪಿಸಿಎಂಎಸ್‌ಯಲ್ಲಿ ಕಳೆದ ಬಾರಿ ಅಧಿಕಾರ ಹಿಡಿದಂತೆ ಈ ಬಾರಿಯೂ ಮುಖಂಡರ ಸಹಕಾರದಿಂದ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರಲಿದೆ ಎಂದರು. ಜಿಪಂ ಸದಸ್ಯೆ ಸುಜಾತ ಕೆ.ಎಂ.ಪುಟ್ಟು, ತಾಪಂ ಸದಸ್ಯರಾದ ವಿ.ಪಿ.ನಾಗೇಶ್, ಸುಂದರೇಶ್, ವಿಶ್ವಾಸ್, ದೊಡ್ಡಯ್ಯ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಮುಖಂಡರಾದ ನರೇಂದ್ರ ಕೆ.ಎಂ.ಪುಟ್ಟು, ಚೌಡಪ್ಪ, ಡಿ.ಸಿ.ಚೌಡೇಗೌಡ, ಗಂಗಾಧರ್, ದೀಲಿಪ್‌ಕುಮಾರ್, ಶಾಂತರಾಜು ಇದ್ದರು.
ಬಿಜೆಪಿಯಿಂದ ಸ್ಪರ್ಧೆ: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ ನೇತೃತ್ವದಲ್ಲಿ ಕಿರುಗಾವಲು ಕ್ಷೇತ್ರದಿಂದ ಶೆಟ್ಟಹಳ್ಳಿ ಶ್ರೀನಿವಾಸ್ ಮತ್ತು ಬಿಜಿಪುರಕ್ಷೇತ್ರದಿಂದ ಸಿದ್ದರಾಜು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಪ್ರಬಲ: ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಪಕ್ಷ ಸಾಕಷ್ಟು ಪ್ರಬಲವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿದ್ದು, ಟಿಎಪಿಸಿಎಂಎಸ್ ಚುನಾವಣಾ ಇತಿಹಾಸದಲ್ಲಿ ಇದುವರೆಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಿರಲಿಲ್ಲ. ಈ ಬಾರಿ ಸ್ಪರ್ಧೆ ಮಾಡಿದ್ದು, ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು. ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಬಸವರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗೇಗೌಡ, ಮುಖಂಡರಾದ ಕಾಂತರಾಜು, ಶಿವಲಿಂಗೇಗೌಡ ಹಾಜರಿದ್ದರು.