Advertisement

ಗಾಳಿಗೆ ಹಾರಿ ಹೋಗುವಂತಿರುವ ಗುಡಿಸಲಿನಲ್ಲಿ ವಾಸ, ಜೀವಕ್ಕೆ ಬೆಲೆ ಇಲ್ಲವೇ?

08:39 PM Mar 19, 2021 | Team Udayavani |

ಎಚ್‌.ಡಿ.ಕೋಟೆ: ಕೊಂಚ ಗಾಳಿ ಬೀಸಿದರೂ ಹಾರಿ ಹೋಗು ವಂತಿರುವ ಗುಡಿಲಿನಲ್ಲಿ ಜೀವ ಭಯದಲ್ಲಿ ಪುಟಾಣಿ ಕಂದಮ್ಮ ನೊಂದಿಗೆ ಕುಟುಂಬವೊಂದು ಬದುಕು ನಡೆಸುತ್ತಿದೆ. ಈ ಮಧ್ಯೆ ವಸತಿ ಯೋಜ ನೆಯಡಿ ಸೂರು ಕಟ್ಟಿಕೊಳ್ಳಲು ಅಡಿಪಾಯ ನಿರ್ಮಿಸಿ ಬರೋಬ್ಬರಿ 3 ವರ್ಷ ಕಳೆದರೂ ಅನುದಾನ ಬಿಡು ಗಡೆಯಾಗಿಲ್ಲ. ಯಾರನ್ನು ಕೇಳಬೇಕು, ಏನು ಮಾಡಬೇಕು ಎಂಬುದು ತೊಚದಂತಾಗಿರುವ ಈ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

Advertisement

ತಾಲೂಕಿನ ಶರೀಫ್ ಕಾಲೋನಿಯಲ್ಲಿ ಅಲೆಮಾರಿ ಸಮುದಾಯದ ಮಹದೇವಮ್ಮ ಹಾಗೂ ಕುಟುಂಬದವರ ಕೈಯಲ್ಲಿ ಜೀವ ಇಟ್ಟು ಕೊಂಡು ದಿನ ದೂಡುತ್ತಿದೆ. ಮಹದೇವಮ್ಮ ತನ್ನ ಪುತ್ರ ಹಾಗೂ ಸೊಸೆ ಮತ್ತು 5-6 ತಿಂಗಳ ಪುಟ್ಟ ಕಂದಮ್ಮ ನೊಂದಿಗೆ ಶಿಥಿಲಾವಸ್ಥೆಯ ಗುಡಿಸಲಿನಲ್ಲಿ ಹಲವಾರು ವರ್ಷ ಗಳಿಂದ ಜೀವನ ಸಾಗುತ್ತಿದ್ದಾರೆ. ಹೆಸರೇ ಹೇಳುವಂತೆ ಶರೀಫ್ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು ಇದ್ದು, ಒಂದೆರಡು ಅನ್ಯ ಸಮು ದಾಯದ ಕುಟುಂಬಗಳು ವಾಸಿಸುತ್ತಿವೆ. ಈ ಸಮುದಾಯದ ನಡುವೆ ಹಲವಾರು ವರ್ಷಗಳಿಂದ ಕೂಲಿ ಮಾಡಿ ಬಡತನದ ಜೀವನ ನಡೆಸುತ್ತಿರುವ ಮಹದೇವಮ್ಮ ಸರ್ಕಾರದಿಂದ ನಿವೇ ಶನ ಪಡೆದಿದ್ದಾರೆ.

ಕೈಗೆ ಸಿಗದ ಹಣ: ಈ ಜಾಗದಲ್ಲಿ ತೆಂಗಿನ ಗರಿಗಳಿಂದ ಗುಡಿ ಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಯಾವಾಗ ಬೇಕಾದರೂ ಗುಡಿಸಲು ಗಾಳಿಗೆ ತೂರಿ ಹೋಗುವಂತಿದೆ. ಈ ನಡುವೆ, ಕಳೆದ 3 ವರ್ಷಗಳ ಹಿಂದೆ ಸರ್ಕಾರದಿಂದ ಸೂರು ಕಲ್ಪಿಸಿಕೊಳ್ಳಲು ಮಂಜೂರಾತಿ ದೊರೆ ತಿದೆ. ಸಾಲಸೋಲ ಮಾಡಿಕೊಂಡು ಅಡಿ ಪಾಯ ನಿರ್ಮಿಸಿಕೊಂಡಿ ದ್ದಾರೆ. ಆದರೆ, ಗೋಡೆಗಳು ಮಾತ್ರ ಇಂದಿಂಚೂ ಮೇಲೆದಿಲ್ಲ.

ಸಾಲಕಾಟ, ಜೀವ ಭಯ: ಕೂಲಿಯನ್ನೇ ಅವಲಂಬಿಸಿರುವ ಈ ಕುಟುಂಬವು, ಸರ್ಕಾರದ ಅನುದಾನ ಆಗ ಈಗ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದೆ. ಮನೆಗೆ ತಳಪಾಯ ನಿರ್ಮಿಸಿ ಕೊಂಡರೆ ಸರ್ಕಾರದಿಂದ ಮೊದಲ ಹಂತದ ಹಣ ಬಿಡುಗಡೆ ಯಾ ಗುತ್ತದೆ. ಆದರೆ ಕೈ ಸಾಲ ಪಡೆದು ತಳಪಾಯ ಪೂರ್ಣಗೊಳಿಸಿ 3 ವರ್ಷ ಕಳೆದರೂ ಇಂದಿಗೂ ಅನುದಾನ ಬಿಡುಗಡೆಯಾಗಿಲ್ಲ. ಇದ ರಿಂದ ಒಂದು ಕಡೆ ಸಾಲಗಾರರ ಕಾಟ, ಮತ್ತೂಂದು ಕಡೆ ಸ್ವಂತ ಸೂರಿಲ್ಲದೇ ಹಂದಿಗೂಡಿನಂತಹ ಗುಡಿಸಲಿನಲ್ಲಿ ಜೀವ ಭಯದಲ್ಲಿ ದಿನ ಕಳೆ ಯುತ್ತಿದ್ದಾರೆ. ಅನುದಾನ ವಿಳಂಬ ಕುರಿತು ಸ್ಥಳೀಯ ಪಡು ಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ, ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಇದೀಗ ಬೇಸಿಗೆ ಕಾಲವಾಗಿದ್ದು, ಮಳೆಗಾಲದೊಳಗೆ ಮನೆ ಪೂರ್ಣ ಗೊಳಿಸಲು ಕುಟುಂಬ ಮುಂದಾಗಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮನೆ ನಿರ್ಮಿಸಿಕೊಳ್ಳುವುದು ಸಾವಾಲಾಗಿದೆ.

ಉಳ್ಳವರಿಗೆ ಅನುದಾನ

Advertisement

ಗ್ರಾಮ ಪಂಚಾಯ್ತಿಯಲ್ಲಿ ಮನೆ ಆಯ್ಕೆಗೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕು ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಿಗುವ ಕಡಿಮೆ ಮೊತ್ತದಲ್ಲೂ ಹೀಗೆ ಕಮಿಷನ್‌ ಕೊಟ್ಟರೆ ಉಳಿದುಕೊಳ್ಳುವುದು ಎಷ್ಟು?, ಬಡವರನ್ನು ಹೀಗೆ ಅಲೆಸಿದರೆ ಯಾರನ್ನೂ ಕೇಳಬೇಕು, ಏನು ಮಾಡಬೇಕ ಎಂಬುದೇ ತೋಚದಂತಾಗಿದೆ. ಈ ಕುಟುಂಬಕ್ಕೆ 3 ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರದ ಸವಲತ್ತುಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿದರೆ ಮಾತ್ರ ಯೋಜನೆಗಳು ಸಫ‌ಲವಾಗಲಿವೆ. ಆದರೆ, ಉಳ್ಳವರೇ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಅರ್ಹರಿಗೆ ವಂಚಿಸಿದಂತಾಗಿದೆ. ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಫ‌ಲಾನುಭವಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶರೀಫ್ ಕಾಲೋನಿ ಯಲ್ಲಿ ಅಲೆಮಾರಿ ಕುಟುಂಬ ವೊಂದು ಮನೆ ನಿರ್ಮಿಸಿಕೊಳ್ಳಲು ತಳಪಾಯ ಪೂರ್ಣಗೊಳಿಸಿದ್ದರೂ ಅನು ದಾನ ಬಿಡುಗಡೆ ಯಾಗದೇ ಇರುವ ವಿಚಾರ ನನಗೆ ತಿಳಿದಿಲ್ಲ. ಫ‌ಲಾನುಭವಿಗಳನ್ನು ಸಂಪರ್ಕಿಸಿ ಶೀಘ್ರ ಮನೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ● ರಾಮಲಿಂಗಯ್ಯ, ತಾಪಂ ಇಒ

ಎಚ್‌.ಬಿ.ಬಸವರಾಜು 

Advertisement

Udayavani is now on Telegram. Click here to join our channel and stay updated with the latest news.

Next