ನವದೆಹಲಿ: ಎಚ್‍ಎಂಡಿ ಗ್ಲೋಬಲ್ ಕಂಪೆನಿ ನೋಕಿಯಾ ಜಿ20 ಎಂಬ ಹೊಸ ಮೊಬೈಲ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ.
ನೋಕಿಯಾ ಫೋನ್‍ಗಳ ಹೊಸ ಜಿ-ಸರಣಿಯು ಬಳಕೆದಾರರಿಗೆ ಅನುಕೂಲಕರವಾದ ವೈಶಿಷ್ಟ್ಯಗಳನ್ನು ಮಿತವ್ಯಯದ ದರದಲ್ಲಿ ನೀಡುವ ಬದ್ಧತೆ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.
ಹೊಸ ನೋಕಿಯಾ ಜಿ20 5050 ಎಂಎಎಚ್ ಬ್ಯಾಟರಿ ಹೊಂದಿದೆ. ಎರಡು ವರ್ಷಗಳ ಆಂಡ್ರಾಯ್ಡ್ ಓಎಸ್‍ನ ಖಚಿತ ನವೀಕರಣಗಳ ಜೊತೆಗೆ ನಿಮ್ಮ ದತ್ತಾಂಶಗಳನ್ನೆಲ್ಲ ಸಾಧ್ಯವಾದಷ್ಟು ಸುರಕ್ಷಿತವಾಗಿಡಲು ಸಹಾಯ ಮಾಡಲು ಮೂರು ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ನೀಡುತ್ತದೆ. ವೈಡ್-ಆ್ಯಂಗಲ್ ಮತ್ತು ಮ್ಯಾಕ್ರೊ ಲೆನ್‌ಸ್, ಶಕ್ತಿಯುತ ಎಐ ಇಮೇಜಿಂಗ್ ಮೋಡ್‌ಗಳು, ಒಜೆಡ್‌ಒ ಆಡಿಯೊ ಮತ್ತು ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಒಳಗೊಂಡಿರುವ 48 ಎಂಪಿ (ಕಾರ್ಲ್ ಜಿಯಸ್) ನಾಲ್ಕು ಲೆನ್ಸ್ ಕ್ಯಾಮರಾ ಹೊಂದಿದೆ. 8 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ.
ನೋಕಿಯಾ ಜಿ20 ಮೊಬೈಲ್ 2021ರಲ್ಲಿನ ನಮ್ಮ ಪ್ರಮುಖ ಮೊಬೈಲ್‌ಗಳಲ್ಲಿ ಒಂದಾಗಿದೆ. ನೋಕಿಯ ಅಭಿಮಾನಿಗಳ ಪಾಲಿಗೆ ಇದೊಂದು ಸಮಗ್ರ ಸ್ವರೂಪದ ಸಾಧನವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರ ಎಲ್ಲ ಅವಶ್ಯಕತೆಗಳಾದ ಅಂದರೆ ಪ್ರೀಮಿಯಂ ವಿನ್ಯಾಸ, ಇತ್ತೀಚಿನ ವೈಶಿಷ್ಟ್ಯಗಳು ಮತ್ತು ರಾಜಿಯಾಗದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಸಾಧನವನ್ನು ವಿನ್ಯಾಸಗೊಳಿಸಿ ತಯಾರಿಸಿದ್ದೇವೆ. ಎಚ್‌ಎಂಡಿಯಲ್ಲಿ, ನಾವು ನಾವೀನ್ಯತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಎಚ್ಎಂಡಿ ಗ್ಲೋಬಲ್ ಉಪಾಧ್ಯಕ್ಷ ಸನ್ಮಿತ್ ಸಿಂಗ್ ಕೊಚ್ಚರ್ ತಿಳಿಸಿದ್ದಾರೆ.
ಈ ಮೊಬೈಲ್ ಮೀಡಿಯಾಟೆಕ್ ಜಿ35 ಪ್ರೊಸೆಸರ್ ಹೊಂದಿದೆ. ಆಂಡ್ರಾಯ್ಡ್ 11 ಓಎಸ್ ಇದ್ದು ಸೈಡ್ ಫಿಂಗರ್‌ಪ್ರಿಂಟ್ ಅನ್‌ಲಾಕ್ ಒಳಗೊಂಡಿದೆ. ನೀರಿನ ಹನಿಯ ಡಿಸ್‌ಪ್ಲೇ, 6.5 ಇಂಚಿನ ಎಚ್‌ಡಿ + ಪರದೆಯನ್ನು ಸಹ ಹೊಂದಿದೆ.
ನೋಕಿಯಾ ಜಿ20 ಹಗುರವಾದ, ಸ್ಲಿಮ್-ಲೈನ್, ಬಾಳಿಕೆ ಬರುವ ಕವಚವನ್ನು ಹೊಂದಿದೆ.
ನೋಕಿಯಾ ಜಿ20, 4ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿ ಹೊಂದಿದೆ. ಬೆಳ್ಳಿ ಮತ್ತು ಕಡುನೀಲಿ ಎರಡು ಬಣ್ಣದಲ್ಲಿ ದೊರಕುತ್ತದೆ. ದರ. 12,999. ಜುಲೈ 15 ರಿಂದ ನೋಕಿಯಾ.ಡಾಟ್‌ಕಾಮ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.
ನೋಕಿಯಾ ಜಿ20ನ ಮುಂಗಡ ಬುಕಿಂಗ್ ಇಂದಿನಿಂದ ಅಮೆಜಾನ್. ಇನ್ ಮತ್ತು ನೋಕಿಯಾ.ಡಾಟ್‌ಕಾಂನಲ್ಲಿ ಪ್ರಾರಂಭವಾಗಿದೆ. ಮೊದಲೇ ಬುಕ್ ಮಾಡುವ ಗ್ರಾಹಕರಿಗೆ 500 ರೂ. ರಿಯಾಯಿತಿ ಇದೆ ಎಂದು ಎಚ್ಎಂಡಿ ಗ್ಲೋಬಲ್ ಪ್ರಕಟಣೆ ತಿಳಿಸಿದೆ.