Advertisement

ಇದೀಗ ನೋಕಿಯಾದಿಂದ ಆ್ಯಂಡ್ರಾಯ್ಡ ಫೋನ್‌!

03:45 AM Jan 09, 2017 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ, ಒಂದು ಕಾಲದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ನೋಕಿಯಾ ಫೋನ್‌ಗಳು ಇದೀಗ ಮತ್ತೆ ಮಾರುಕಟ್ಟೆ ಪ್ರವೇಶಿಸಿವೆ. ಅದೂ ಜನರ ಅತಿ ಬೇಡಿಕೆಯ ಆ್ಯಂಡ್ರಾಯ್ಡ ಫೋನ್‌ ರೂಪದಲ್ಲಿ. ನೋಕಿಯಾ ಬ್ರ್ಯಾಂಡ್‌ನ‌ ಹಕ್ಕು ಹೊಂದಿರುವ ಎಚ್‌ಎಂಡಿ ಗ್ಲೋಬಲ್‌ ನೋಕಿಯಾ 6 ಹೆಸರಿನ ಆ್ಯಂಡ್ರಾಯ್ಡ ಆಪರೇಟಿಂಗ್‌ ಇರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಸದ್ಯ ಇದು ಚೀನದಲ್ಲಿ ಮಾತ್ರ ಲಭ್ಯ. 

Advertisement

ಆ್ಯಂಡ್ರಾಯ್ಡ ನೂತನ ಆವೃತ್ತಿ 7.0 ನುಗಾಟ್‌ ಅನ್ನು ಇದು ಹೊಂದಿದ್ದು, 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಕ್ವಾಲಕ್‌¾ ಸ್ನಾಪ್‌ಡ್ರಾಗನ್‌ 430 ಎಸ್‌ಒಸಿ ಪ್ರೊಸೆಸರ್‌ ಹೊಂದಿದ್ದು, 4ಜಿಬಿ ರ್ಯಾಮ್‌ ಹೊಂದಿದೆ. 64 ಜಿಬಿ ಹಾರ್ಡ್‌ ಡ್ರೈವ್‌ ಹೊಂದಿದೆ. ನೋಕಿಯಾ 6 ಡ್ಯುಎಲ್‌ ಸಿಮ್‌ ಫೋನ್‌ ಆಗಿದ್ದು, 3000 ಎಮ್‌ಎಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 16 ಮೆಗಾಪಿಕ್ಸಲ್‌ನ ಹಿಂಬದಿ ಕ್ಯಾಮೆರಾ, 8 ಮೆಗಾಪಿಕ್ಸಲ್‌ನ ಮುಂಭಾಗದ ಕ್ಯಾಮೆರಾ ಹೊಂದಿದೆ. ಸದ್ಯ ಚೀನದಲ್ಲಿ ಇದರ ಬೆಲೆ 16,750 ರೂ. ಆಗಿದೆ. ಸದ್ಯ ಚೀನ ಬಿಟ್ಟು ಬೇರಾವುದೇ ದೇಶಗಳಲ್ಲಿ ನೋಕಿಯಾ ಫೋನ್‌ ಬಿಡುಗಡೆ ಮಾಡುವ ಉದ್ದೇಶವಿಲ್ಲ ಎಂದು ಎಚ್‌ಎಮ್‌ಡಿ ಕಂಪನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next