ಅಂಕೋಲಾ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಮತ್ತು ಆತನ ಬೆಂಜ್
ಲಾರಿ ಪತ್ತೆ ಹಚ್ಚಿದ ಬಳಿಕ ಮತ್ತೆ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯಾಚರಣೆ ಮುಂದುವರೆದಿದೆ.
Advertisement
ಶಿರೂರು ಗ್ರಾಮದ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಕೂಡ ಕಣ್ಮರೆಯಾಗಿದ್ದು ಅವರ ಹುಡುಕಾಟವುನಡೆದಿದೆ. ಲಕ್ಷ್ಮಣ ನಾಯ್ಕ ಹೊಟೇಲ್ ಬಳಿ ಬಿದ್ದಿರುವ ಮಣ್ಣಿನ ರಾಶಿಯನ್ನು ಗುರುವಾರ ತೆರವು ಮಾಡಲಾಗುತ್ತಿದ್ದು, ಅಲ್ಲಿಯೇ
ಇವರಿಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜಗನ್ನಾಥ ಮತ್ತು ಲೋಕೇಶ ಕುಟುಂಬವು ಸ್ಥಳದಲ್ಲಿ ತಮ್ಮವರಿಗಾಗಿ
ಕಾಯುತ್ತಿದ್ದರೆ.
ಘಟನಾ ಸ್ಥಳದಲ್ಲಿ ದೊರೆತಿರುವ ಅರ್ಜುನನ ಮೃತ ದೇಹವನ್ನು ಗಂಗಾವಳಿ ನದಿ ದಡದಿಂದ ವಾಹನಕ್ಕೆ ಸಾಗಿಸಲು ಯಾರೂ
ಮುಂದೆ ಬರಲಿಲ್ಲ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ಐ ಉದ್ದಪ್ಪ ಧರೆಪ್ಪನವರ ಸ್ವತಃ ಎತ್ತಿ ಸಾಗಿಸುವುದರ
ಮೂಲಕ ಮಾನವೀಯತೆ ಮೆರೆದಿದ್ದಾರೆ.
Related Articles
ದೇಹವನ್ನು ವಾರಸುದಾರರಿಗೆ ನೀಡಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
Advertisement