Advertisement

ನೋಕಿಯ 2110

04:35 AM Jul 06, 2020 | Lakshmi GovindaRaj |

ನೋಕಿಯ, ಫಿನ್ಲಂಡ್‌ ಮೂಲದ ಕಂಪನಿ. ಸ್ಮಾರ್ಟ್‌ಫೋನುಗಳು ಲಗ್ಗೆಯಿಡುವುದಕ್ಕೂ ಮೊದಲು ಎಲ್ಲರ ಜೇಬುಗಳಲ್ಲಿ ಇದ್ದಿದ್ದು ನೋಕಿಯ ಸಂಸ್ಥೆಯ ಮೊಬೈಲುಗಳೇ. “ನಿಮ್ಮ ಪ್ರಥಮ ಮೊಬೈಲು ಯಾವ ಕಂಪನಿಯಯಾಗಿತ್ತು?’   ಎಂದು ಯಾರನ್ನು ಕೇಳಿದರೂ, ಹೆಚ್ಚಿನವರ ಉತ್ತರ ನೋಕಿಯ ಎಂದೇ ಆಗಿರುತ್ತದೆ. ಅಷ್ಟು ‌ಪ್ರಖ್ಯಾತವಾಗಿದ್ದ ಕಂಪನಿ, ಭಾರತದಲ್ಲಿ ಬಿಡುಗಡೆಗೊಳಿಸಿದ ಪ್ರಪ್ರಥಮ ಮೊಬೈಲು ನೋಕಿಯ 2110.

Advertisement

ಜನಪ್ರಿಯ ನೋಕಿಯಾ ಟ್ಯೂನನ್ನು  ಹೊತ್ತ ಪ್ರಥಮ ಮೊಬೈಲ್‌ ಫೋನು ಕೂಡಾ ಇದೇ. ಆಗ 10 ಡಯಲ್ಡ್‌ ಕಾಲ್, 10 ಮಿಸ್ಡ್ ಕಾಲ್‌ ಸೇವ್‌ ಮಾಡಿಟ್ಟುಕೊಳ್ಳುವ ಸಾಮರ್ಥ್ಯವನ್ನು ಮೊಬೈಲು ಹೊಂದಿತ್ತು. ಇದರ  ಚಿಕ್ಕ ಗಾತ್ರ ಮತ್ತು ದೊಡ್ಡ ಪರದೆ ಎಲ್ಲರ ಮೆಚ್ಚುಗೆಗೆ  ಪಾತ್ರವಾಗಿತ್ತು. ಈ ಮೊಬೈಲು ಕ್ರಾಂತಿಕಾರಕ ಬದಲಾವಣೆಗೆ ಪ್ರೇರಣೆಯಾಗಿದ್ದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

ಅದೇನೆಂದರೆ, ಈ ಮೊಬೈಲಿನಲ್ಲಿ ಎರಡು ಅಪ್‌ ಮತ್ತು ಡೌನ್‌ ಬಟನ್‌ಗಳನ್ನು ನೀಡಲಾಗಿತ್ತು. ಇದೇ ಮುಂದೆ ನ್ಯಾವ್‌  ಬಟನ್‌ಗಳಿಗೆ‌ ಪ್ರೇೆರಣೆಯಾಯಿತು. ‘ನ್ಯಾವ್‌’ ಎಂದರೆ ಅಪ್‌, ನ್‌, ಎಡ ಮತ್ತು ಬಲ ಬಟನ್‌ಗಳು. ಪ್ರಖ್ಯಾತವಾಗಿದ್ದ ನೋಕಿಯ ಕಂಪನಿ, ದೀರ್ಘ‌ ಬಾಳಿಕೆಯ, ಹೆಚ್ಚು ಬ್ಯಾಟರಿ ಚಾರ್ಜ್‌ ಹೊಂದಿದ್ದ ಮೊಬೈಲು ಇಂದು ಸ್ಮಾರ್ಟ್‌ ಫೋನ್‌  ಭರಾಟೆಯ ನಡುವೆ ಹಿನ್ನೆಲೆಗೆ ಸರಿದದ್ದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next