Advertisement
ಟ್ವಿನ್ ಟವರ್‌ಗಳು ನೆಲಸಮಗೊಂಡ ಪ್ರದೇಶದ ಸುತ್ತಮುತ್ತಲೂ ಧೂಳಿನ ದಟ್ಟ ಪದರ ಸೃಷ್ಟಿಯಾಗಿದೆ. ಮರಗಿಡಗಳು, ಕಟ್ಟಡಗಳು, ರಸ್ತೆಗಳು ಧೂಳಿನ ಹೊದಿಕೆಯಲ್ಲಿ ಕಣ್ಮರೆಯಾಗಿದ್ದು, ಸೋಮವಾರ ಮುಂಜಾನೆಯಿಂದಲೇ ಸ್ವಚ್ಛತಾ ಕೆಲಸವನ್ನು ಸಮರೋಪಾದಿಯಲ್ಲಿ ಆರಂಭಿಸಲಾಗಿದೆ.
Related Articles
ಸೂಪರ್‌ಟೆಕ್ ಅವಳಿ ಕಟ್ಟಡಗಳನ್ನು ಯಶಸ್ವಿಯಾಗಿ ಕೆಡವುವ ಮೂಲಕ ಭಾರತವು 100 ಮೀಟರ್‌ಗಿಂತ ಎತ್ತರದ ಕಟ್ಟಡಗಳನ್ನು ನೆಲಸಮಗೊಳಿಸಿದ ದೇಶಗಳ ಕ್ಲಬ್‌ಗೆ ಸೇರ್ಪಡೆಯಾಗಿದೆ. ಇದರ ಹೆಗ್ಗಳಿಕೆಯು ಎಡಿಫೈಸ್ ಎಂಜಿನಿಯರಿಂಗ್‌ನ ಇಡೀ ತಂಡಕ್ಕೆ ಸಲ್ಲುತ್ತದೆ ಎಂದು ದಕ್ಷಿಣ ಆಫ್ರಿಕಾದ ಸಂಸ್ಥೆ ಜೆಟ್ ಡೆಮಾಲಿಷನ್ಸ್‌ನ ಜೋ ಬ್ರಿಂಕ್‌ಮನ್ ಹೇಳಿದ್ದಾರೆ.
Advertisement
ಮುಂಬೈ ಕಟ್ಟಡಗಳ ಆಡಿಟ್ ನಡೆಯಲಿನೋಯ್ಡಾ ಕಟ್ಟಡ ನೆಲಸಮ ಬೆನ್ನಲ್ಲೇ ಮುಂಬೈನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಗಗನಚುಂಬಿ ಕಟ್ಟಡಗಳ ಆಡಿಟ್ ನಡೆಸಬೇಕೆಂದು ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಆಗ್ರಹಿಸಿದ್ದಾರೆ. ಫ್ಲ್ಯಾಟ್ ಮಾಲೀಕರ ಹಿತಾಸಕ್ತಿಯ ರಕ್ಷಣೆಗಾಗಿ ಇಂಥ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಏಕನಾಥ ಶಿಂಧೆ ಅವರಿಗೆ ಬರೆದ ಪತ್ರದಲ್ಲಿ ಸೋಮಯ್ಯ ಮನವಿ ಮಾಡಿದ್ದಾರೆ. ಈ ನಡುವೆ, ಸೋಮವಾರ ಮಾತನಾಡಿರುವ ಉತ್ತರಪ್ರದೇಶ ಮಾಜಿ ಸಿಎಂ, ಎಸ್‌ಪಿ ನಾಯಕ ಅಖೀಲೇಶ್ ಯಾದವ್, “ನೋಯ್ಡಾದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ ಸೂಪರ್‌ಟೆಕ್‌ನ ಬಿಲ್ಡರ್‌ಗಳ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲವೇಕೆ’ ಎಂದು ಪ್ರಶ್ನಿಸಿದ್ದಾರೆ.