Advertisement

ಬೃಹತ್ ಅವಳಿ ಕಟ್ಟಡಗಳು ಕೇವಲ 10 ಸೆಕೆಂಡ್ ಗಳಲ್ಲಿ ಕಲ್ಲು ಮಣ್ಣಿನ ರಾಶಿ

03:04 PM Aug 28, 2022 | Team Udayavani |

ನೋಯ್ಡಾ: ಇಲ್ಲಿನ ಅಕ್ರಮ ಸೂಪರ್‌ಟೆಕ್‌ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಸುರಕ್ಷಿತವಾಗಿ ನೆಲಸಮ ಮಾಡಲಾಗಿದೆ. ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದ ಕಟ್ಟಡಗಳು ಕೇವಲ 10 ಸೆಕೆಂಡ್ ಗಳಲ್ಲಿ ಕಲ್ಲು ಮಣ್ಣಿನ ರಾಶಿಯಾಗಿ ಕುಸಿದಿವೆ. ಭಾರಿ ಪ್ರಮಾಣದ ಧೂಳು ನಭೋ ಮಂಡಲದತ್ತ ವ್ಯಾಪಿಸಿದೆ.

Advertisement

ಮೂವರು ವಿದೇಶಿ ತಜ್ಞರು, ಭಾರತೀಯ ಬ್ಲಾಸ್ಟರ್ ಚೇತನ್ ದತ್ತಾ, ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಜನರು ಮಾತ್ರ ಸ್ಫೋಟಕ್ಕಾಗಿ ಬಟನ್ ಒತ್ತಲು ಹೊರಗಿಡಲಾಗಿದ್ದ ವಲಯದೊಳಗೆ ಉಳಿದಿದ್ದರು. 3,700 ಕೆಜಿ ಸ್ಫೋಟಕಗಳು ಕಟ್ಟಡ ಕೆಡವಲು ಬಳಸಿಕೊಳ್ಳಲಾಗಿದೆ. ಸುಮಾರು 20 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ.

ನಿರ್ಮಾಣ ಕಾನೂನುಗಳ ಉಲ್ಲಂಘನೆಗಾಗಿ ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಅವಳಿ ಕಟ್ಟಡಗಳನ್ನು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಉರುಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next