ನೊಯ್ಡಾ : ಉತ್ತರ ಪ್ರದೇಶದಲ್ಲಿ 6 ರಿಂದ 8 ನೇ ತರಗತಿಗಳು ಕಳೆದ ವಾರ ಪುನರಾರಂಭವಾಗಿದ್ದರೂ ಕೂಡ ತರಗತಿಗೆ ವಿದ್ಯಾರ್ಥಿಗಳು ಅಲ್ಪ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ ಎನ್ನುವುದು ವರದಿಯಾಗಿದೆ.
ಕಳೆದ ವಾರ ಶೇಕಡಾ 10 ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದು, ಪೋಷಕರು ಈ ಕೊವೀಡ್ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವುದನ್ನು ಮತ್ತೆ ದೃಢಪಡಿಸಿದ್ದಾರೆ.
ಓದಿ :ಕೆರಾಡಿ ಗ್ರಾ.ಪಂ.: ಚೀಟಿ ಎತ್ತಿ ಅಧ್ಯಕ್ಷ ಸ್ಥಾನದ ಆಯ್ಕೆ : ಕೈಗೆ ಒಲಿದ ಅದೃಷ್ಟ
“ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರ ಪೋಷಕರ ಮೇಲೆ ನಿರ್ಧರಿಸಿದ್ದಾಗಿದೆ, ಎಂದು ಉತ್ತರ ಪ್ರದೇಶ ಸರ್ಕಾರದ ಮಾರ್ಗ ಸೂಚಿ ಹೇಳಿತ್ತು. ಇನ್ನೂ ಕೂಡ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಭಯಭೀತರಾಗಿದ್ದಾರೆ. ಇದು ತರಗತಿಯ ಹಾಜರಾತಿ ವಿಚಾರಕ್ಕೂ ಪರಿಣಾಮ ಬೀರಿದೆ” ಎಂದು ವರದಿಯಾಗಿದೆ.
“ಪೋಷಕರ ಒಪ್ಪಿಗೆ ಇಲ್ಲದೇ ನಾವು ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಯಾವುದಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೂ ಪೋಷಕರು ಶಾಲೆಗೆ ಕಳುಹಿಸಿ, ಅಲ್ಲಿ ವಿದ್ಯಾರ್ಥಿ ಯಾವುದಾದರೂ ಆರೋಗ್ಯ ಸಮಸ್ಯಗೆ ಒಳಗಾದರೇ ಶಾಲೆ ಅದಕ್ಕೆ ಜವಾಬ್ದಾರಿಯಾಗಿರುವುದಿಲ್ಲ” ಎಂದು ಎಲ್ಲಾ ಶಾಲಾ ವಿದ್ಯಾರ್ಥಿ ಪೋಷಕರ ಸಂಘದ ಅಧ್ಯಕ್ಷೆ ಶಿವಾನಿ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಕಳೆದ ವಾರ ಶಾಲಾ ತರಗತಿಗಳು ಪುನರಾರಂಭವಾದಾಗಿನಿಂದ ಎಲ್ಲಾ ಶಾಲೆಗಳ ಬಗ್ಗೆ ನಾವು ಗಮನಿಸುತ್ತಿದ್ದೇವೆ. ಶೇಕಡಾ 5 ರಿಂದ 10 ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗುತ್ತಿದ್ದಾರೆ. ಶಾಲಾ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಕೋವಿಡ್ ಲಸಿಕೆಗಳನ್ನು ಇದುವರೆಗೆ ನೀಡಲಾಗಿಲ್ಲ. ಈ ವಿಚಾರವೂ ಕೂಡ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಕಾರಣವಾಗಿರಬಹುದು” ಎಂದು ಅವರು ಹೇಳಿದ್ದಾರೆ.
ಓದಿ : ಬಿಗ್ ಬಾಸ್ಕೆಟ್ ನಲ್ಲಿ ಸುಮಾರು 68% ಹೂಡಿಕೆ ಮಾಡಲಿರುವ ಟಾಟಾ..!