Advertisement

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

12:12 AM Oct 03, 2023 | Team Udayavani |

ಹೊಸದಿಲ್ಲಿ: ಧಾರ್ಮಿಕ ಗ್ರಂಥಗಳ ಮೇಲೆ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ. ಅದೇ ರೀತಿ ಭಗವದ್ಗೀತೆ ಮೇಲೆ ಯಾರ ಹಕ್ಕು ಸ್ವಾಮ್ಯ ಇರುವುದಿಲ್ಲ. ಆದರೆ ಅದರ ಮೇಲಿನ ಸ್ವಂತ ವಾಖ್ಯಾನಗಳ ಮೇಲೆ ಹಕ್ಕು ಸ್ವಾಮ್ಯ ಹೊಂದಬಹುದು ಎಂದು ದಿಲ್ಲಿ ಹೈಕೋರ್ಟ್‌ ತಿಳಿಸಿದೆ.

Advertisement

ಇಸ್ಕಾನ್‌ ಸ್ಥಾಪಕ ಭಕ್ತಿವೇದಾಂತ ಶ್ರೀಲ ಪ್ರಭುಪಾದರು ಸ್ಥಾಪಿಸಿರುವ ಭಕ್ತಿವೇದಾಂತ ಬುಕ್‌ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪ್ರತಿಭಾ ಎಂ. ಸಿಂಗ್‌ ಅವರಿದ್ದ ನ್ಯಾಯಪೀಠ, “ಮೂಲ ಗ್ರಂಥ ರಚನೆಗೆ ಮಾತ್ರ ಹಕ್ಕು ಸ್ವಾಮ್ಯ ಇರುತ್ತದೆ. ಅದರ ಕೃತಿಚೌರ್ಯವು ಅಪರಾಧವಾಗಿದೆ’ ಎಂದು ಹೇಳಿದೆ. “ಆದರೆ ಭಗವದ್ಗೀತೆ ಸೇರಿದಂತೆ ಧಾರ್ಮಿಕ ಗ್ರಂಥಗಳ ಮೇಲೆ ಯಾರೋ ಒಬ್ಬರ ಹಕ್ಕು ಸ್ವಾಮ್ಯ ಇರುವುದಿಲ್ಲ. ಬದಲಾಗಿ ಈ ಕುರಿತ ಸ್ವಂತ ವಾಖ್ಯಾನ, ಪ್ರವಚನ, ವಿವರಣೆ, ವಾಖ್ಯಾರ್ಥದ ಗ್ರಂಥಗಳು ಅಥವಾ ಆಡಿಯೋ-ವೀಡಿಯೋ ಮಾಹಿತಿ ಮೇಲೆ ಹಕ್ಕು ಸ್ವಾಮ್ಯ ಸಾಧಿಸಬಹುದಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next