Advertisement

Nobel; ಜಪಾನ್ ನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

04:08 PM Oct 11, 2024 | Team Udayavani |

ಹೊಸದಿಲ್ಲಿ: 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆ ನಿಹಾನ್ ಹಿಡಾಂಕ್ಯೊಗೆ ನೀಡಲಾಗುತ್ತಿದೆ.

Advertisement

ನಿಹಾನ್ ಹಿಡಾಂಕ್ಯೊ ಹಿರೋಷಿಮಾ ಮತ್ತು ನಾಗಸಾಕಿಯ ಮೇಲಾದ ಪರಮಾಣು ಬಾಂಬ್ ಬದುಕುಳಿದವರನ್ನು (ಹಿಬಾಕುಶಾ) ಪ್ರತಿನಿಧಿಸುತ್ತದೆ. 47 ಜಪಾನೀಸ್ ಸದಸ್ಯರ ಗುಂಪು ಬಹುತೇಕ ಎಲ್ಲಾ ಸಂಘಟಿತ ಹಿಬಾಕುಶಾವನ್ನು ಒಂದುಗೂಡಿಸಿದೆ. ಸಂಸ್ಥೆಯ ನಾಯಕರು ಮತ್ತು ಸದಸ್ಯರೆಲ್ಲರೂ ದಾಳಿಯಲ್ಲಿ ಬದುಕುಳಿದವರಾಗಿದ್ದಾರೆ.

“ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂಬ ಸಾಕ್ಷ್ಯವನ್ನು ಪ್ರದರ್ಶಿಸಲು” ಸಂಸ್ಥೆಯು ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ನಾರ್ವೇ ನೊಬೆಲ್ ಸಮಿತಿ ಘೋಷಿಸಿದೆ.

ಎರಡನೇ ವಿಶ್ವ ಯುದ್ಧದ ವೇಳೆ 1945 ರ ಆಗಸ್ಟ್ 6 ರಂದು ಬೆಳಗ್ಗೆ ಜಪಾನ್ ಹಿರೋಷಿಮಾದ ಮೇಲೆ ಅಮೆರಿಕ 15-ಕಿಲೋಟನ್ ಅಣುಬಾಂಬ್ ಅನ್ನು ಹಾಕಿತ್ತು. ವರ್ಷದ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 140,000 ಕ್ಕೆ ಏರಿತ್ತು. ಭೀಕರ ದಾಳಿಯ ಮೂರು ದಿನಗಳ ನಂತರ ಅಮೆರಿಕನ್ನರು ನಾಗಸಾಕಿಯ ಮೇಲೆ ಪ್ಲುಟೋನಿಯಂ ಬಾಂಬ್ ಅನ್ನು ಬೀಳಿಸಿದ್ದರು ಅದು 74,000 ಜನರನ್ನು ಬಲಿ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next