ಸ್ಟಾಕ್ ಹೋಮ್: 2023ರ ನೊಬೆಲ್ ಶಾಂತಿ ಪುರಸ್ಕಾರ ಪ್ರಕಟಗೊಂಡಿದ್ದು ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರವನ್ನು, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳನ್ನು ನೀಡಬೇಕು ಎಂದು ಹೋರಾಟ ಮಾಡಿದ ಇರಾನಿನ ಮಹಿಳೆ ನರ್ಗೆಸ್ ಮೊಹಮ್ಮದಿ ಅವರಿಗೆ ನೀಡಲಾಗಿದೆ.
ನರ್ಗೆಸ್ ಅವರು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಮಾನವ ಹಕ್ಕುಗಳ ಜೊತೆಗೆ ಎಲ್ಲರಿಗೂ ಸ್ವಾತಂತ್ರ್ಯ ಸಿಗಬೇಕು ಎನ್ನುವ ಉದ್ದೇಶದಿಂದ ಹೋರಾಟ ಮಾಡಿದ್ದರು. ಹೋರಾಟಕ್ಕಾಗಿ ನರ್ಗೆಸ್ ಮೊಹಮ್ಮದಿ ಅವರಿಗೆ ನಾರ್ವೇಜಿಯನ್ ನೊಬೆಲ್ ಸಮಿತಿ ಶುಕ್ರವಾರ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದೆ.
ಅಪಾರವಾದ ವೈಯಕ್ತಿಕ ವೆಚ್ಚವನ್ನು ಭರಿಸಿಯೇ ನರ್ಗೆಸ್ ಹೋರಾಟವನ್ನು ಮಾಡಿಕೊಂಡು ಬಂದಿದ್ದು ಇದಕ್ಕಾಗಿ ಅವರು ಸುಮಾರು ಹದಿಮೂರು ಬಾರಿ ಬಂಧನಕ್ಕೆ ಒಳಗಾಗಿದ್ದರು, ಐದು ಬಾರಿ ಶಿಕ್ಷೆ ಕೂಡ ವಿಧಿಸಲಾಗಿದೆ, ಇದುವರೆಗೂ ನಡೆಸಿದ ಹೋರಾಟದಲ್ಲಿ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಕಠಿಣ ಶಿಕ್ಷೆಯನ್ನು ನೀಡಿತ್ತು.
ಫ್ರಂಟ್ ಲೈನ್ ಡಿಫೆಂಡರ್ಸ್ ಹಕ್ಕುಗಳ ಸಂಘಟನೆಯ ಪ್ರಕಾರ, ರಾಜ್ಯದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂಬ ಆಪಾದನೆಯ ಮೇಲೆ ನರ್ಗೆಸ್ ಮೊಹಮ್ಮದಿ ಅವರು ಪ್ರಸ್ತುತ ಟೆಹ್ರಾನ್‌ನ ಎವಿನ್ ಜೈಲಿನಲ್ಲಿದ್ದು ಸುಮಾರು 12 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದೆ.
ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ನಾರ್ವೆಯ ತಜ್ಞರ ಸಮಿತಿಯು 350 ನಾಮನಿರ್ದೇಶನಗಳ ಪಟ್ಟಿಯಿಂದ ಇವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಇದೆ ಪ್ರಶಸ್ತಿಯನ್ನು ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾ, ಮಿಖಾಯಿಲ್ ಗೋರ್ಬಚೇವ್, ಆಂಗ್ ಸಾನ್ ಸೂ ಕಿ ಮತ್ತು ವಿಶ್ವಸಂಸ್ಥೆಯ ಇತರ ಸಾಧಕರಿಗೆ ನೀಡಲಾಗಿತ್ತು.
ಇದನ್ನೂ ಓದಿ: Drought; 4,860 ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ: ಸಿಎಂ