Advertisement

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

03:50 PM Apr 21, 2024 | Team Udayavani |

ಕಲಬುರಗಿ: ರಾಜ್ಯ ಸರ್ಕಾರದಲ್ಲಿ ಅಸ್ಥಿರತೆ ಕಾಡುತ್ತಿದ್ದು, ಲೋಕಸಭಾ ಚುನಾವಣೆ ನಂತರ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯ ವಿಲ್ಲ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Advertisement

ಬಿಜೆಪಿ ಪ್ರಚಾರದಂಗವಾಗಿ ಇಲ್ಲಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಸಚಿವ ಶಿವಾನಂದ ಪಾಟೀಲ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲಿಂಗಾಯಿತ ಸ್ವಾಮೀಜಿಯವರೊಂದಿಗೆ ಮಾತನಾಡಿರುವ ಕಾನ್ಫರೆನ್ಸ್ ಕಾಲ್ ನಲ್ಲಿ ಲಿಂಗಾಯತರ ಆಶೀರ್ವಾದ ಇರಲಿ.‌ ಒಕ್ಕಲಿಗರು- ಲಿಂಗಾಯತರು ಒಂದಾಗಿ ಲೋಕಸಭಾ ಚುನಾವಣೆ ಮುಗಿದ 15 ದಿನದೊಳಗೆ ಸಿಎಂ ಸಿದ್ದರಾಮಯ್ಯ ಅವರನ್ನು ಇಳಿಸುತ್ತೇವೆ ಎಂದಿರುವುದು, ಒಕ್ಕಲಿಗರ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಈ ಚುನಾವಣೆಯಲ್ಲಿ ಕೈ ಹಿಡಿಯಿರಿ, ಒಕ್ಕಲಿಗ ಸಿಎಂ ಆಗೋದನ್ನು ತಪ್ಪಿಸಬೇಡಿ ಎಂದಿರುವುದು ಒಂದೆಡೆಯಾದರೆ,ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರ ಲೋಕಸಭಾ ಕ್ಷೇತ್ರದ ವರುಣಾದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿಸದಿದ್ದರೆ ಕುರ್ಚಿ ಹೋಗುತ್ತದೆ ಎಂದಿರುವುದು ಅವಲೋಕಿಸಿದರೆ ಸರ್ಕಾರ ಉಳಿಯುವುದೇ ಇಲ್ಲ. ಈಗಾಗಲೇ ಏಕನಾಥ್ ಶಿಂಧೆ, ಅಜಿತ್ ಪವಾರ್ ಜನ್ಮ ತಳೆದಿದ್ದಾರೆ.‌ನಾಮಕರಣ ಮಾಡಲಾಗಿದೆ.‌ ಲೋಕಸಭಾ ಚುನಾವಣೆ ನಂತರ ಪ್ರೌಢಾವಸ್ಥೆ ಗೆ ಬರುತ್ತಾರೆ ಎಂದರು.

ಸಿದ್ದರಾಮಯ್ಯ- ಡಿಕೆಸಿ ನಡುವಿನ ಗುದ್ದಾಟದ ಎಲ್ಲ ಅಂಶಗಳನ್ನು ಅವಲೋಕಿಸಿದರೆ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಲು ಎಲ್ಲ ರೀತಿಯ ಅಜೆಂಡಾ ರೆಡಿ ಆಗಿದೆ ಎಂಬುದು ನಿರೂಪಿಸುತ್ತದೆ.‌ ಹೀಗಾಗಿ ಸಿಎಂ ಸಿದ್ಧ ರಾಮಯ್ಯ ಸಿಎಂ ಆಗಿ ಮುಂದುವರೆಯಲು ಹಾಲು ಮತದವರು ಎಚ್ಚರವಾಗಿರಬೇಕು.‌ ಏಲ್ಲೆಲ್ಲಿ ಡಿಕೆಶಿ ಚೀಲಾಗಳು ನಿಂತಿದ್ದಾರೆಯೋ ಅವರನ್ನು ಸೋಲಿಸಿದರೆ ಸಿದ್ದರಾಮಯ್ಯ ಸುರಕ್ಷಿತವಾಗಿ ಇರುತ್ತಾರೆ ಎಂದರು.

ಚೊಂಬು ಕಾಂಗ್ರೆಸ್ ಕೊಡುಗೆ
ದೇಶದಲ್ಲಿ ಚೊಂಬು ಕೊಟ್ಟಿರುವುದು ಕಾಂಗ್ರೆಸ್. ಚಂದ್ರಶೇಖರ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆಯಲ್ಲಿ ಸಾಲಕ್ಕಾಗಿ ದೇಶದ ಚಿನ್ನ ಅಡವು ಇಡಲಾಗಿತ್ತು.‌ ಚಂದ್ರಶೇಖರ ಅವರನ್ನು ಬೆಂಬಲ‌ ನೀಡಿದವರ್ಯಾರು? ಮೋದಿ ಅವರು ಪಿಎಂ ಆದ ನಂತರ ಅಮೃತ ಕಲಶ ನೀಡಿದ್ದಾರೆ.‌ ಮೋದಿ‌ ಅವರು 14 ವರ್ಷ ಸಿಎಂ ಹಾಗೂ 10 ಪಿಎಂ ಆಗಿ ಕೇವಲ 2.30 ಕೋ.ರೂ ಮೊತ್ತ ಆಸ್ತಿ ಹೊಂದಿದ್ದಾರೆ. ಆದರೆ ಇದೇ ಡಿಕೆಶಿ ಸಹೋದರರು 2 ಸಾವಿರಕ್ಕೂ ಅಧಿಕ ಆಸ್ತಿ ಹೊಂದಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ಏನು ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ದುರಹಂಕಾರ
ಗ್ಯಾರಂಟಿಗಳ ಗಳಿಂದ ಗೆಲ್ಲುತ್ತೇವೆ ಎಂಬ ಅಂಹಕಾರ ಕಾಂಗ್ರೆಸ್ ಹೊಂದಿದೆ.‌ ಇದೇ ಕಾರಣಕ್ಕೆ ಆಡಳಿತ ಸಂಪೂರ್ಣ ಕುಸಿದಿದೆ. ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಂಡ ರೀತಿ ಒಂದೇ ವರ್ಗದ ಪರ‌ನಿಂತಿರುವುದು ಕಂಡು ಬರುತ್ತಿದೆ.‌ ಬಿಜೆಪಿ ಯಾವುದೇ ಧರ್ಮದ ವಿರೋಧವಿಲ್ಲ. ಇಲ್ಲಿಯ ಅನ್ನ ತಿಂದು ಬೇರೆಯವರಿಗೆ ಜೈ ಅನ್ನುವರಿಗೆ ತಮ್ಮ‌ಬೆಂಬಲವಿಲ್ಲ. ಮೋದಿ ಹಾಡು ಮಾಡಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಒಟ್ಟಾರೆ ಗ್ಯಾರಂಟಿ ಹವಾ ದಲ್ಲಿ‌ ತೇಲಲಾಗುತ್ತಿದೆ ಎಂದರು.

Advertisement

ಸಂಸದ ಡಾ.‌ಉಮೇಶ ಜಾಧವ್, ಬಿಜೆಪಿ‌ ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next