Advertisement

ವ್ಯಾಲೆಂಟೈನ್‌ ಡೇ ಬದಲು ಮಹಾ ಶಿವರಾತ್ರಿ ಆಚರಿಸಿ: ಲಕ್ನೋ ವಿವಿ

11:22 AM Feb 13, 2018 | udayavani editorial |

ಲಕ್ನೋ : ”ಫೆ.14ರ ವ್ಯಾಲೆಂಟೈನ್‌ ದಿನದಂದು ಯುನಿವರ್ಸಿಟಿನಲ್ಲಿ ಕ್ಯಾಂಪಸ್‌ನಲ್ಲಿ ಯಾರೂ ಅಲೆದಾಡಬಾರದು; ಈ ಆದೇಶವನ್ನು ಪರಿಪಾಲಿಸದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಲಕ್ನೋ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಕಟ್ಟಪ್ಪಣೆ ಹೊರಡಿಸಿದೆ.

Advertisement

ವ್ಯಾಲೆಂಟೈನ್‌ ಡೇ ಆಚರಿಸುವ ಬದಲು ಮಹಾ ಶಿವರಾತ್ರಿಯನ್ನು ಆಚರಿಸಿ ಮತ್ತು ಆ ಮೂಲಕ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ದೂರ ಇರಿ ಎಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದೆ.

ಕಳೆದ ಅನೇಕ ವರ್ಷಗಳಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಪ್ರಭಾವಕ್ಕೆ ಗುರಿಯಾಗಿ ಫೆ.14ರಂದು ವ್ಯಾಲೆಂಟೈನ್‌ ಡೇ ಆಚರಿಸುವುದು ಕಂಡು ಬಂದಿದೆ. ಆದರೆ ಈ ಬಾರಿ ಫೆ.14ರಂದು ಮಹಾ ಶಿವರಾತ್ರಿ ಪ್ರಯುಕ್ತ ರಜೆ ಸಾರಲಾಗಿದ್ದು ವಿವಿ ಬಂದ್‌ ಇರುತ್ತದೆ. ಹಾಗಾಗಿ ಯಾವುದೇ ವಿದ್ಯಾರ್ಥಿಗಳು ಕ್ಯಾಂಪಸ್‌ ನಲ್ಲಿ ಅಲೆದಾಡಕೂಡದು ಮತ್ತು ವ್ಯಾಲೆಂಟೈನ್‌ ಡೇ ಆಚರಿಸಬಾರದು; ಬದಲಾಗಿ ವಿದ್ಯಾರ್ಥಿಗಳು ಮಹಾ ಶಿವರಾತ್ರಿಯನ್ನು ಅಚರಿಸಬೇಕು ಎಂದು ಯುನಿವರ್ಸಿಟಿ ಹೊರಡಿಸಿರುವ ನೊಟೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. 

ಫೆ.14ರ ಬುಧವಾರ ವಿವಿಗೆ ರಜೆ ಇದ್ದು ಕ್ಯಾಂಪಸ್‌ ಮುಚ್ಚಿರುವುದರಿಂದ ಹೆತ್ತವರು ಯಾರೂ ತಮ್ಮ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೆ ವಿವಿಗೆ ಕಳುಹಿಸಬಾರದು. ಆ ದಿನ ವಿವಿಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಾಗಲೀ ಪರೀಕ್ಷೆ, ತರಗತಿಗಳಾಗಲೀ ಇರುವುದಿಲ್ಲ ಎಂದು ನೊಟೀಸ್‌ ನಲ್ಲಿ  ಹೆತ್ತವರಿಗೂ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next