ಶಿವಮೊಗ್ಗ: ರಾಜ್ಯಾದ್ಯಂತ ಇಂದು ಸರ್ಕಾರಿ ಪ್ರಾಥಮಿಕ ಶಾಲೆಗಳು ಆರಂಭವಾಗಿದೆ. ಹಲವು ಸಮಯದ ಬಳಿಕ ಚಿಣ್ಣರು ಶಾಲೆಗೆ ತೆರಳಿದ್ದಾರೆ. ಶಾಲೆಗಳಲ್ಲೂ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳು ಶಾಲೆಗೆ ಬಂದರೂ ಶಿಕ್ಷರು ಬಾರದ ಪ್ರಸಂಗ ನಡೆಯಿತು.
ಜಿಲ್ಲೆಯ ಹೊಸನಗರ ತಾಲೂಕಿನ ಮೂಡುಗೊಪ್ಪ ಪಂಚಾಯತ್ ವ್ಯಾಪ್ತಿಯ ದುಬಾರ್ ತಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕರು ಗೈರಾದರು.
ಶಾಲೆಯಲ್ಲಿ 22 ಮಕ್ಕಳಿದ್ದರೂ ಖಾಯಂ ಶಿಕ್ಷಕರಿಲ್ಲದೇ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಮಕ್ಕಳು ಉತ್ಸಾಹದಿಂದ ಶಾಲೆಗೆ ಆಗಮಿಸಿದರೂ ಶಾಲೆಯಲ್ಲಿ ಶಿಕ್ಷಕರು ಇರದ ಕಾರಣ ಮಕ್ಕಳು, ಪೋಷಕರು ನಿರಾಶರಾದರು. ಬೇರೆ ಶಾಲೆಯ ಶಿಕ್ಷಕರನ್ನು ತಾತ್ಕಾಲಿಕವಾಗಿ ಕರ್ತವ್ಯಕ್ಕೆ ನಿಯೋಜಿಸದಂತೆ ಪೋಷಕರು ಒತ್ತಾಯಿಸಿದರು.
ಇದನ್ನೂ ಓದಿ:ಸಿಂದಗಿ ಜನರು ಕಾಂಗ್ರೆಸ್ ಕೋಣ, ಜೆಡಿಎಸ್ ಹಸು ಬಿಟ್ಟು ಬಿಜೆಪಿ ಎತ್ತು ಕಟ್ಟಿ : ಸಿ.ಟಿ.ರವಿ
ಶಿಕ್ಷಕರು ಬಾರದ ಹಿನ್ನೆಲೆ ಪೋಷಕರಿಂದ ಇಲಾಖೆಯ ವಿರುದ್ಧ ಪ್ರತಿಭಟನೆ. ನಡೆಸಲಾಯಿತು. ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ದುಬಾರ್ ತಟ್ಟಿ ಗ್ರಾಮಸ್ಥರು ಒತ್ತಾಯಿಸಿದರು.