Advertisement

ಭಾರತಕ್ಕೆ ಪೆಟ್ರೋಲ್‌, ಡೀಸೆಲ್‌ ಕೊರತೆ ಇಲ್ಲ: IOC ಸ್ಪಷ್ಟನೆ

10:18 AM Mar 31, 2020 | Hari Prasad |

ಹೊಸದಿಲ್ಲಿ: ಇಡೀ ದೇಶ ಲಾಕ್‌ಡೌನ್‌ ಆಗಿದೆ. ಸಾರಿಗೆ ಸ್ತಬ್ಧವಾಗಿದೆ. ಮುಂದೆ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಕಥೆ ಏನು? ಪ್ರಧಾನಿ ಅವರು, ಉಜ್ವಲ್‌ ಫ‌ಲಾನುಭವಿಗಳಿಗೆ 3 ತಿಂಗಳಿಗೆ ಆಗುವಷ್ಟು ಉಚಿತವಾಗಿ ಎಲ್‌ಪಿಜಿ ವ್ಯವಸ್ಥೆ ನೀಡಿದ್ದಾರೆ. ದೇಶಕ್ಕೆ ಗ್ಯಾಸ್‌ ಸಿಲಿಂಡರ್‌ ಸಾಕಾಗುತ್ತಾ? ಜನ ಈ ಬಗ್ಗೆ ಗಾಬರಿಗೊಳ್ಳುವ ಅಗತ್ಯವೇ ಇಲ್ಲ ಎಂಬ ಭರವಸೆಯನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ (ಐಒಸಿ) ನೀಡಿದೆ.

Advertisement

ಲಾಕ್‌ಡೌನ್‌ ಇದ್ದರೂ, ದೇಶದಲ್ಲಿ ತೈಲದ ಕೊರತೆ ಬೀಳುವುದಿಲ್ಲ. ಏಪ್ರಿಲ್‌ ತಿಂಗಳವರೆಗೆ ಆಗುವಷ್ಟು ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿಯನ್ನು ಭಾರತ ಈಗಾಗಲೇ ಸಂಗ್ರಹಿಸಿದೆ ಎಂದು ಐಒಸಿ ಚೇರ್ಮನ್‌ ಸಂಜೀವ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ದೇಶದ ಮೂಲೆ ಮೂಲೆಗಳಿಗೆ ಇಂಧನ ತೈಲ ರವಾನಿಸಲು ಸಮರೋಪಾದಿಯಲ್ಲಿ ಕೆಲಸ ಸಾಗಿದೆ. ಈಗಾಗಲೇ ಏಪ್ರಿಲ್‌ನ ಬೇಡಿಕೆಗೆ ಆಗುವಷ್ಟು ಇಂಧನ ತೈಲ ರವಾನೆಯಾಗಿದೆ. ಗ್ಯಾಸ್‌ ಬುಕ್ಕಿಂಗ್‌ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ.

ಬೃಹತ್‌ ಸಂಗ್ರಹಕಾರ ಕೇಂದ್ರಗಳು, ಎಲ್‌ಪಿಜಿ ಹಂಚಿಕೆದಾರರು, ಪೆಟ್ರೋಲ್‌ ಬಂಕ್‌ಗಳಿಗೆ ಇಂಧನ ತೈಲ ಪೂರೈಸಿಯೂ, ಸಾಕಷ್ಟು ಸಂಗ್ರಹವನ್ನು ತುರ್ತು ಸೇವೆಗೆ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.

– ದ್ವಿಚಕ್ರ ವಾಹನಗಳು, ಕಾರುಗಳ ಓಡಾಟ ನಿಂತಿರುವುದರಿಂದ ಪೆಟ್ರೋಲ್‌ ಬೇಡಿಕೆ ಶೇ.8ರಷ್ಟು ಕಡಿಮೆಯಾಗಿದೆ.

Advertisement

– ಮಾರ್ಚ್‌ ತಿಂಗಳ ಡೀಸೆಲ್‌ ಬೇಡಿಕೆಯಲ್ಲಿ ಶೇ.16 ತಗ್ಗಿದೆ.

– ವಿಮಾನ ಹಾರಾಟ ನಿಷಿದ್ಧವಾಗಿರುವುದರಿಂದ ವೈಮಾನಿಕ ಇಂಧನದ ಬೇಡಿಕೆ ಶೇ.20ರಷ್ಟು ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next