Advertisement

ಕರ್ನಾಟಕ ಲಾಕ್ ಡೌನ್: ಇತಿಹಾಸದಲ್ಲಿ ಮೊದಲ ಬಾರಿಗೆ ಶಂಕರಪುರ ಮಲ್ಲಿಗೆ ಮಾರುಕಟ್ಟೆ ಸ್ಥಗಿತ

11:11 AM Mar 27, 2020 | keerthan |

ಕಟಪಾಡಿ: ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್-19 ಸೋಂಕಿನ ತಡೆಗೆ ರಾಜ್ಯ ಸರಕಾರ ಲಾಕ್ ಡೌನ್  ಆದೇಶ ನೀಡಿದ್ದು, ರಾಜ್ಯ ಬಹುತೇಕ ಸ್ತಬ್ಧವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದವಾಗಿರುವ ಶಂಕರಪುರ ಮಲ್ಲಿಗೆ ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಗಿತವಾಗಿದೆ.

Advertisement

ಮಾರ್ಚ್ 31ರವರೆಗೆ ಕರ್ನಾಟಕ ಲಾಕ್ ಡೌನ್ ಆಗಿರುವ ಕಾರಣ ಸರ್ಕಾರದ ಆದೇಶದ ಮೇರೆಗೆ ಮಲ್ಲಿಗೆ ಮಾರುಕಟ್ಟೆ ಸ್ಥಗಿತಗೊಳಿಸಲು ಡೀಲರ್ ಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ವರದಿಯಾಗಿದೆ.

ಕೊವಿಡ್-19 ಸೋಂಕು ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವ ಕಾರಣ ಎಲ್ಲಾ ಸಮಾರಂಭಗಳು, ಜಾತ್ರೆಗಳನ್ನು ರದ್ದು ಮಾಡಲು ಸರಕಾರ ಆದೇಶಿಸಿದೆ. ಆ ಕಾರಣದಿಂದ ಮಲ್ಲಿಗೆಯ ದರವೂ ಕುಸಿತವಾಗಿದ್ದು, ಒಂದು ಅಟ್ಟೆ ಮಲ್ಲಿಗೆ ದರ ಕೇವಲ 50 ರೂ. ಇದೆ.

ಪೇಟೆ ಬಂದ್: ಕಟಪಾಡಿ – ಉದ್ಯಾವರ ಪೇಟೆಯಲ್ಲಿ ಅಗತ್ಯದ ತುರ್ತು ಹಾಲು ತರಕಾರಿ ಅಂಗಡಿಗಳು ಮಾತ್ರ ಕಾರ್ಯಾಚರಿಸುತ್ತಿದ್ದು, ಬೆಳಿಗ್ಗೆ  ಜನರು ತರಕಾರಿಗಳು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಉಳಿದಂತೆ ಬಹುತೇಕ ಎಲ್ಲಾ ಮಳಿಗೆಗಳು ಮುಚ್ಚಿದ್ದು ಮೆಡಿಕಲ್ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next