Advertisement

ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ: ಸದ್ಗುರು

09:15 AM May 23, 2022 | Team Udayavani |

ಹೊಸದಿಲ್ಲಿ: ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ ಎಂದಾದ ಮೇಲೆ ಆಕ್ರಮಣದ ಸಮಯದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಆಧ್ಯಾತ್ಮಿಕ ನಾಯಕ ಸದ್ಗುರು ಹೇಳಿದರು.

Advertisement

ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ ಅವರು, “ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳನ್ನು ನೆಲಸಮಗೊಳಿಸಲಾಯಿತು. ಆಗ ನಾವು ಅವುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈಗ ಅವುಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಏಕೆಂದರೆ ನಾವು ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ” ಎಂದರು.

“ಎರಡು ಸಮುದಾಯಗಳು (ಹಿಂದೂ ಮತ್ತು ಮುಸ್ಲಿಮರು) ಒಂದು ಸಮಯದಲ್ಲಿ ಒಂದು ವಿಚಾರವನ್ನು ಚರ್ಚಿಸುವ ಬದಲು ಮತ್ತು ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿಡುವ ಬದಲು ಒಟ್ಟಿಗೆ ಕುಳಿತು ಎರಡು-ಮೂರು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಕೆಲವು ಕೊಡು- ಕೊಳ್ಳುವಿಕೆಯೂ ನಡೆಯಬೇಕು. ಇದು ರಾಷ್ಟ್ರದ ಮುಂದಿನ ದಾರಿ. ನಾವು ಹಿಂದೂ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಎಂಬ ವಿಚಾರದಲ್ಲೇ ಯೋಚಿಸಬಾರದು.” ಎಂದು ಅವರು ಹೇಳಿದರು.

ಇದನ್ನೂ ಓದಿ:ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಕೇಳಿದಾಗ, ಈ ವಿಷಯದ ಬಗ್ಗೆ ತಾನು ಅಪ್ ಡೇಟ್ ಆಗಿಲ್ಲ ಎಂದು ಸದ್ಗುರು ಹೇಳಿದರು.

Advertisement

ಭಾರತವು ಈ ಸಮಯದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಈ ಹಂತದಲ್ಲಿ ನಾವು ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಎಲ್ಲವನ್ನೂ ದೊಡ್ಡ ವಿವಾದವನ್ನಾಗಿ ಮಾಡುವ ಮೂಲಕ ನಾವು ಅದನ್ನು ಹಾಳುಮಾಡಬಾರದು. ಇದನ್ನು (ಮಂದಿರ-ಮಸ್ಜಿದ್ ವಿವಾದ) ವಿವಾದಾತ್ಮಕಗೊಳಿಸದಂತೆ ನಾನು ಜನರನ್ನು ಮತ್ತು ಸುದ್ದಿ ಸಂಸ್ಥೆಗಳನ್ನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next