Advertisement
ಹೆದ್ದಾರಿ ಸಂಪರ್ಕ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹಾಗೂ ಭಾರತ ಸರ್ಕಾರದ ಆದೇಶದ ಅನುಸಾರ ಜೆಎಸ್‌ಆರ್ ಟೋಲ್‌ವೇಸ್ ಪ್ರೈವೇಟ್ ಕಂಪನಿ 2015ರಲ್ಲಿ ಮುಳಬಾಗಿಲು ನಗರದ ಅಂಚಿನಿಂದ ಕರ್ನಾಟಕ ಗಡಿ ಭಾಗದವರೆಗೆ ಸುಮಾರು 15 ಕಿ.ಮೀ.ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆಯನ್ನು ನೂರಾರು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದರಿಂದ ತಾಲೂಕಿನ ಜನತೆ ಆಂಧ್ರದ ಚೆನ್ನೈ, ತಿರುಪತಿ ಮತ್ತು ಬೆಂಗಳೂರು ಸೇರಿ ಯಾವುದೇ ಮೂಲೆಗೆ ಹೋಗಬೇಕಾದರೂ ಇದೇ ಹೆದ್ದಾರಿ ಸಂಪರ್ಕ ಕಲ್ಪಿಸಲಿದೆ.
Related Articles
Advertisement
ಬಿಸಿಲು-ಮಳೆಗೆ ತಂಗುದಾಣ ಆಶ್ರಯಿಸಿದರೂ ಪ್ರಯೋಜನವಿಲ್ಲಈಗಾಗಲೇ ಸೊನ್ನವಾಡಿ ಬೈಪಾಸ್ ಸಮೀಪ, ನರಸಿಂಹತೀರ್ಥ, ಸೀಗೇನಹಳ್ಳಿ, ಅಲ್ಲಾಲಸಂದ್ರ ಗೇಟ್, ಕಪ್ಪಲಮಡಗು, ಶ್ರೀರಂಗಪುರ, ವೆಂಕಟಾಪುರ, ಎನ್.ವಡ್ಡಹಳ್ಳಿ, ಪದ್ಮಘಟ್ಟ, ತಾತಿಕಲ್, ಹಳೆಕುಪ್ಪ, ನಂಗಲಿ,ಮುದಿಗೆರೆ, ಗಡೂxರು ಗೇಟ್‌ಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.ಆದರೆ, ಬಸ್ ನಿಲುಗಡೆ ಒಂದುಕಡೆಯಾದರೆ, ಶೆಲ್ಟರ್ ನಿರ್ಮಿಸಿರುವುದು ಮತ್ತೂಂದುಕಡೆ. ಇದರಿಂದಾಗಿ ಸದರಿ ಶೆಲ್ಟರ್‌ಗಳು ಜನರ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೇ ಈ ಬಸ್ ಗೇಟ್‌ಗಳಲ್ಲಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ತಂಗುದಾಣಗಳನ್ನು ಆಶ್ರಯಿಸಿದರೂ ಸುರಕ್ಷತೆ ಇಲ್ಲದೇ ಪ್ರಯಾಣಿಕರು ಪರದಾಡುವಂತಹ ಸನ್ನಿವೇಶ ಎದುರಾಗಿದೆ. ರಾ. ಹೆ.75ರಲ್ಲಿ ನಿರ್ಮಿ ಸಿರುವ ತಂಗುದಾಣಗಳಿಂದ ಜನರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಜಿಲ್ಲಾಧಿ ಕಾರಿಗಳ ಗಮನಕ್ಕೆ ತರಲಾಗುವುದು. ನಂತರಕ್ರಮ ಕೈಗೊಳ್ಳಲಾಗುವುದು.
– ರಾಜಶೇಖರ್, ತಹಶೀಲ್ದಾರ್ ರಾ.ಹೆ.75ರ ಮುಳಬಾಗಿಲಿನಿಂದ ಕರ್ನಾಟಕ ಗಡಿವರೆಗೂ ಜೆಎಸ್‌ಆರ್ ಕಂಪನಿ ಆಯಾ ಗೇಟ್‌ಗಳಲ್ಲಿ ಸುರಕ್ಷತೆಯುಳ್ಳ ಬಸ್ ಶೆಲ್ಟರ್ ನಿರ್ಮಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳುಕ್ರಮಕೈಗೊಳ್ಳಬೇಕು.
-ಕಸವಿರೆಡ್ಡಿಹಳ್ಳಿ ರಾಜು, ಮುಖಂಡ -ಎಂ.ನಾಗರಾಜಯ್ಯ