Advertisement

ಗುಜರಾತ್‌ನಲ್ಲಿ ಮತಯಂತ್ರ ತಿರುಚಲಾದ ಪ್ರಶ್ನೆಯೇ ಇಲ್ಲ: ಚು. ಆಯೋಗ

11:13 AM Dec 18, 2017 | udayavani editorial |

ಹೊಸದಿಲ್ಲಿ : ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು ಸೋಮವಾರ ಆರಂಭಗೊಂಡ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕತ್ತು ಕತ್ತಿನ ಸ್ಪರ್ಧೆ ಏರ್ಪಟ್ಟ ವೇಳೆಯಲ್ಲೇ ಅತ್ತ ಮುಖ್ಯ ಚುನಾವಣಾಧಿಕಾರಿ ಎ ಕೆ ಜ್ಯೋತಿ ಅವರು “ಗುಜರಾತ್‌, ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಮತಯಂತ್ರ ತಿರುಚುವಿಕೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ’ ಎಂದು ಹೇಳಿದ್ದಾರೆ.

Advertisement

“ಮತಯಂತ್ರಗಳನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ ಎಂಬ ಬಗ್ಗೆ ನಾನು ನಿಮಗೆ ವಿಶ್ವಾಸ ಕೊಡಿಸುತ್ತೇನೆ; ಮತಯಂತ್ರಗಳ ಬಗ್ಗೆ ಎತ್ತಲಾದ ಪ್ರಶ್ನೆಗಳು ಮತ್ತು ಸಂದೇಹಗಳ ಬಗ್ಗೆ ನಾವು ಈಗಾಗಲೇ ಮಾಧ್ಯಮದಲ್ಲಿ ಉತ್ತರ ಕೊಟ್ಟಿದ್ದೇವೆ” ಎಂದವರು ಹೇಳಿದರು.

ಈ ಚುನಾವಣೆಗಳಲ್ಲಿ  ಎಲ್ಲೆಡೆಯೂ ವಿವಿಪ್ಯಾಟ್‌ ಯಂತ್ರಗಳಿದ್ದವು; ಹಾಗಾಗಿ ಪ್ರತಿಯೋರ್ವ ಮತದಾರನಿಗೂ ತಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು; ಹಾಗಿರುವಾಗಿ ಎಲ್ಲಿಯೂ ಮತ ಯಂತ್ರ ತಿರುಚಲಾಗಿರುವ ಪ್ರಮೇಯವೇ ಇಲ್ಲ’ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next