Advertisement
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೆ ಓದಿದ್ದಾರೆ. ಹಿಂದೂ ಶಬ್ದ ಪರ್ಶಿಯನ್ ಶಬ್ದ ಅದಕ್ಕೆ ದಾಖಲೆ ಇದೆ ವಿಕಿಪೀಡಿಯಾದಲ್ಲಿ ನೋಡಬಹುದೆಂದು ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿದೆ, ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದ್ದು. ನಾನು ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿದ್ದೇನೆ. ಅಶ್ಲೀಲವಾಗಿ ಅಂತಾ ಇದ್ದಿದ್ದು ಆ ಡಿಕ್ಷನರಿಯಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡರು.
Related Articles
Advertisement
ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಅರೆಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಸಾಬೀತು ಮಾಡಬೇಕು. ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು ಎಂದು ಹಲವು ಬಿಜೆಪಿ ನಾಯಕರೇ ಮಾತನಾಡಿದ್ದಾರೆ. ವ್ಯವಸ್ಥಿತವಾಗಿ ಇದನ್ನ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಸುರ್ಜೇವಾಲಾ ಖಂಡನೆ ಮಾಡಿದ್ದಾರೆ ಅವರು ನಮಗಿಂತ ಹಿರಿಯರು ಆಕ್ಷೇಪ ಮಾಡಲ್ಲ ಎಂದರು.
ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ, ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ನಿಮ್ಮ ಕಡೆ ಏನಾದರೂ ಸರಿಯಾದ ದಾಖಲೆ ಇದ್ದರೆ ಮುಂದುವರಿಸಿ. ಅವರದ್ದೇ ಸರ್ಕಾರ ಇದೆ, ಸಿಎಂ ತನಿಖೆ ಮಾಡಲಿ ಒಂದು ಕಮಿಟಿ ಮಾಡಿ ಸತ್ಯಾಸತ್ಯತೆ ಹೊರ ಬರಲಿ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ, ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ. ನಾನು ಚುನಾವಣೆ ದೃಷ್ಟಿಯಿಂದ ಹೇಳಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ ಮಾಡಲಿ. ನಾಲ್ಕು ಜನ ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ ಎಂದರು.