Advertisement

ಸಿದ್ದರಾಮಯ್ಯ ಅವರಲ್ಲಿ ಶುದ್ಧತೆ ಇಲ್ಲ: ಸಿ.ಟಿ.ರವಿ

09:14 PM Dec 18, 2022 | Shreeram Nayak |

ಬೆಂಗಳೂರು: “ಶುದ್ಧ ಹಿಂದೂ ಎಂದು ಹೇಳಿಕೊಳ್ಳಲಿಕ್ಕೂ ಶುದ್ಧತೆ ಇರಬೇಕಾಗುತ್ತದೆ. ಆದರೆ, ಬೆರಕೆ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಲ್ಲಿ ಆ ಶುದ್ಧತೆಯೇ ಇಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು.

Advertisement

ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಶಕ್ತಿ ಸಂಗಮ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕನ್ನಡಿಗರ ಮೇಲೆ ಪರ್ಷಿಯನ್‌ ಭಾಷೆಯನ್ನು ಹೇರಿದ ಟಿಪ್ಪುವನ್ನು ಎತ್ತಿ ಮೆರೆಸುತ್ತಿರುವ ಮತಾಂಧ ಸಿದ್ದರಾಮಯ್ಯ. ಅಷ್ಟೇ ಅಲ್ಲ, “ಪ್ರವಾಸ ಭಾಗ್ಯ’ ನೆಪದಲ್ಲಿ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಿದ, ಶಾದಿಭಾಗ್ಯ ಮತ್ತಿತರ ಕಾರ್ಯಕ್ರಮಗಳಿಂದ ಜಾತಿ ರಾಜಕಾರಣ ಮಾಡುವವರು ಶುದ್ಧವಾಗಿರಲು ಹೇಗೆ ಸಾಧ್ಯ’ ಎಂದು ತರಾಟೆಗೆ ತೆಗೆದುಕೊಂಡರು.

“ಮನೆಹಾಳು ಮಾಡುವ ಜಾತಿ ರಾಜಕಾರಣದಲ್ಲಿ ಸಿದ್ದರಾಮಯ್ಯ ನಿರತರಾಗಿದ್ದಾರೆ. ಅವರು ಶುದ್ಧ ಹಿಂದೂ ಆಗಲಿ ಎಂದು ನಿಮ್ಮ ತಂದೆ ಆ ಹೆಸರಿಟ್ಟರು. ಆದರೆ, ನೀವ್ಯಾಕೆ ಹೀಗಾದಿರಿ” ಎಂದು ಪ್ರಶ್ನಿಸಿದ ಸಿ.ಟಿ. ರವಿ, ಇಂತಹ ಮತಾಂಧನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ತಪ್ಪು ಮಾಡಿದೆ ಎಂದು ಬಹುಶಃ ಅವರ ತಂದೆಯ ಆತ್ಮ ಈಗ ವಿಲವಿಲ ಒದ್ದಾಡುತ್ತಿರಬಹುದು ಎಂದೂ ಹೇಳಿದರು.

“ಒಂದು ವೇಳೆ ನೀವು (ಸಿದ್ದರಾಮಯ್ಯ ಅವರಿಗೆ) ಶುದ್ಧ ಹಿಂದೂ ಆಗಿದ್ದರೆ, ಪಿಎಫ್ವೈ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಹೇಳಿದ್ದು ಎಷ್ಟು ಸರಿ? ಕುಂಕುಮ ಕಂಡರೆ ಭಯವಾಗುತ್ತದೆ ಎಂದು ಹೇಳುತ್ತೀರಿ. ಆದರೆ, ನಿಮ್ಮ ನಾಯಕರೇ ಈಚೆಗೆ ಹಣೆತುಂಬ ಕುಂಕುಮ ಹಚ್ಚಿಕೊಂಡಿದ್ದರು. ಆಗ ಭಯ ಆಗಲಿಲ್ಲವೇ?’ ಎಂದು ಕೇಳಿದರು.

ಸಿದ್ದು ಅರಿತು ಮಾತನಾಡಲಿ: ಸಿಎಂ
ಹುಬ್ಬಳ್ಳಿ: ಕುಕ್ಕರ್‌ ಬಾಂಬ್‌ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೇಳಿಕೆ ಪರಿಪೂರ್ಣವಾಗಿ ಅರ್ಥೈಸಿಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವುದು ಒಳಿತು. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರೇ ಕುಕ್ಕರ್‌ ಸ್ಫೋಟವನ್ನು ಆಕಸ್ಮಿಕ ಘಟನೆ ಎಂದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ ಪ್ರತಿಕ್ರಿಯೆಯ ಪೂರ್ಣ ಹೇಳಿಕೆ ಕೇಳಿಕೊಂಡು ಮಾತನಾಡಿದರೆ ಅವರ ಸ್ಥಾನಕ್ಕೆ ಗೌರವ ಬರುತ್ತದೆ ಎಂದರು.

Advertisement

ಹೊಸ ಪಿಂಚಣಿ ಯೋಜನೆ ವ್ಯವಸ್ಥೆ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಬೆಳಗಾವಿ ಅ ಧಿವೇಶನದಲ್ಲಿ ಹಲವಾರು ಪ್ರಮುಖ ಬಿಲ್‌ಗ‌ಳನ್ನು ತರಲಿದ್ದೇವೆ. ಅದರಲ್ಲಿ ಮುಖ್ಯವಾಗಿ ಎಸ್ಸಿ-ಎಸ್ಟಿ ಮೀಸಲಾತಿ ಬಿಲ್‌ ಪಾಸಾಗಲಿದೆ. ಉತ್ತರ ಕರ್ನಾಟಕಕ್ಕೆ ಸಂಬಂ ಧಿಸಿ ಹಲವಾರು ವಿಚಾರ ಚರ್ಚೆಗೆ ಬರಲಿವೆ. ಈ ಭಾಗದಲ್ಲಿ ಅಧಿವೇಶನ ಮಾಡಿದಾಗ ಇಲ್ಲಿನ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲಾಗುವುದು. ಎಂಇಎಸ್‌ ಪುಂಡಾಟ ಇದು ಮೊದಲೇನಲ್ಲ. 50 ವರ್ಷಗಳಿಂದ ಇಂತಹ ಪುಂಡಾಟಿಕೆ ಮಾಡಿಕೊಂಡು ಬರುತ್ತಿದೆ. ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂಬುದು ನಮಗೆ ಗೊತ್ತಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next