Advertisement

ಟೆಸ್ಟ್‌ ಸರಣಿ : ಕೌಂಟಿ ವಿರುದ್ಧ ಭಾರತಕ್ಕೆ ಅಭ್ಯಾಸ ಪಂದ್ಯವಿಲ್ಲ

11:43 PM Jun 25, 2021 | Team Udayavani |

ಲಂಡನ್‌ : ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗಬೇಕಿರುವ ಭಾರತ ತಂಡಕ್ಕೆ ಯಾವುದೇ ಕೌಂಟಿ ವಿರುದ್ಧ ಅಭ್ಯಾಸ ಪಂದ್ಯ ಲಭಿಸುವ ಸಾಧ್ಯತೆ ಇಲ್ಲ ಎಂದು ಇಸಿಬಿ ತಿಳಿಸಿದೆ. ಹೀಗಾಗಿ ತನ್ನದೇ ಆಟಗಾರರ ತಂಡಗಳನ್ನು ಕಟ್ಟಿ ಅಭ್ಯಾಸ ಪಂದ್ಯಗಳನ್ನು ಆಡುವುದು ಅನಿವಾರ್ಯವಾಗಿದೆ.

Advertisement

“ಕೋವಿಡ್‌ ನಿಯಮಾವಳಿಯಂತೆ ಪ್ರವಾಸಿ ಭಾರತಕ್ಕೆ ಕೌಂಟಿ ವಿರುದ್ಧ ಅಭ್ಯಾಸ ಪಂದ್ಯ ಆಡಲು ಸಾಧ್ಯವಾಗದು. ಹೀಗಾಗಿ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಡರ್‌ಹಮ್‌ನ “ರಿವರ್‌ಸೈಡ್‌ ಗ್ರೌಂಡ್‌’ನಲ್ಲಿ ಭಾರತ ತನ್ನ ತಂಡಗಳ ನಡುವೆಯೇ ಚತುರ್ದಿನ ಪಂದ್ಯಗಳನ್ನು ಆಡಬೇಕಿದೆ’ ಎಂದು ಇಸಿಬಿ ತಿಳಿಸಿದೆ. ಭಾರತ ಒಟ್ಟು 24 ಆಟಗಾರರೊಂದಿಗೆ ಇಂಗ್ಲೆಂಡಿಗೆ ತೆರಳಲಿದೆ.

ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡಕ್ಕೆ ಕೆಲವು ಅಭ್ಯಾಸ ಪಂದ್ಯಗಳನ್ನು ಆಯೋಜಿಸುವಂತೆ ಇಸಿಬಿಗೆ ಬಿಸಿಸಿಐ ಮನವಿ ಮಾಡಿತ್ತು. ಸುನೀಲ್‌ ಗಾವಸ್ಕರ್‌ ಮೊದ ಲಾದ ಮಾಜಿಗಳೂ ಇದರ ಪ್ರಸ್ತಾವ ಮಾಡಿದ್ದರು. ಆದರೆ ಇಂಗ್ಲೆಂಡಿನ ಕೌಂಟಿ ಆಟಗಾರರಿಗೆ ಜೈವಿಕ ಸುರಕ್ಷಾ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯವಾಗಿರುವುದರಿಂದ ಅಭ್ಯಾಸ ಪಂದ್ಯ ಕೂಡ ಸಾಧ್ಯವಿಲ್ಲ ಎಂಬುದು ಇಸಿಬಿ ನಿಲುವು.

ಇದನ್ನೂ ಓದಿ :ವಿಂಬಲ್ಡನ್‌ ಡ್ರಾ : ಮೊದಲ ಸುತ್ತಿನಲ್ಲಿ ಜೊಕೋಗೆ ಸುಲಭ ಎದುರಾಳಿ

ಭಾರತದ ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಸೋಲಿಗೂ ಅಭ್ಯಾಸದ ಕೊರತೆಯೇ ಕಾರಣ ಎಂದು ವಿಶ್ಲೇಷಿ ಸಲಾಗುತ್ತದೆ. ಇಂಗ್ಲೆಂಡ್‌ನ‌ಂಥ ದೇಶಗಳಲ್ಲಿ ಅಲ್ಲಿನ ಟ್ರ್ಯಾಕ್‌ ಪರಿಚಯವಾಗದ ಹೊರತು ನೇರವಾಗಿ ಅಂತಾ ರಾಷ್ಟ್ರೀಯ ಪಂದ್ಯವಾಡಿದರೆ ಹಿನ್ನಡೆ ಕಟ್ಟಿಟ್ಟ ಬುತ್ತಿ ಎಂಬುದು ಸಾಬೀತಾಗಿದೆ.

Advertisement

ಆಯ್ಕೆಗಾರರ ಪ್ರಯಾಣವಿಲ್ಲ
ಟೆಸ್ಟ್‌ ಸರಣಿ ವೇಳೆ ಭಾರತದ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್‌ ಶರ್ಮ ಮತ್ತು ಹಿರಿಯ ಆಯ್ಕೆಗಾರ ಸುನೀಲ್‌ ಜೋಶಿ ಅವರ ಇಂಗ್ಲೆಂಡ್‌ ಪ್ರಯಾಣದ ಯೋಜನೆ ರದ್ದುಗೊಂಡಿದೆ.

ಇಂಗ್ಲೆಂಡ್‌ನ‌ಲ್ಲಿ ಕಠಿನ ಕ್ವಾರಂಟೈನ್‌ ನಿಯಮ ಇರುವುದರಿಂದ ಹಾಗೂ “ಕೆಂಪು ಪಟ್ಟಿ ವಲಯ’ವಾದ ಭಾರತದಿಂದ ಯುನೈಟೆಡ್‌ ಕಿಂಗ್‌ಡಮ್‌ಗೆ ನೇರ ವಿಮಾನ ಸೌಕರ್ಯ ಇಲ್ಲದಿರುವುದೇ ಇದಕ್ಕೆ ಕಾರಣ. ಆದರೆ ಆಯ್ಕೆ ಸಮಿತಿಯ ಉಳಿದಿಬ್ಬರು ಸದಸ್ಯರಾದ ದೇಬಶಿಷ್‌ ಮೊಹಂತಿ ಮತ್ತು ಅಬೆ ಕುರುವಿಲ್ಲ ಭಾರತದ ಮತ್ತೂಂದು ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಇವರಿಬ್ಬರೂ ಮುಂಬಯಿ ಹೊಟೇಲಿನಲ್ಲಿ ಆಟಗಾರರೊಂದಿಗೆ ಕ್ವಾರಂಟೈನ್‌ ಮುಗಿಸಿದ್ದಾರೆ.

ಇಶಾಂತ್‌ಗೆ ಗಾಯ: ಟೆಸ್ಟ್‌ಗೆ ಸಮಸ್ಯೆ ಇಲ್ಲ
ಸೌತಾಂಪ್ಟನ್‌: ಭಾರತ ತಂಡದ ಅನುಭವಿ ವೇಗಿ ಇಶಾಂತ್‌ ಶರ್ಮ ಅವರ ಬಲಗೈಗೆ ಗಾಯವಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ.

ಭಾರತ-ನ್ಯೂಜಿಲ್ಯಾಂಡ್‌ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ವೇಳೆ ಇಶಾಂತ್‌ ಚೆಂಡನ್ನು ತಡೆಯಲೆತ್ನಿಸಿದಾಗ ಬಲಗೈಗೆ ಗಾಯವಾಗಿತ್ತು. ಆದರೆ ಇದರಿಂದ ಭಾರತ- ಇಂಗ್ಲೆಂಡ್‌ ಟೆಸ್ಟ್‌ ಸರಣಿಗೇನೂ ಸಮಸ್ಯೆ ಆಗದು, ಆಗ ಇಶಾಂತ್‌ ಫಿಟ್‌ ಆಗಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next