Advertisement
ಲೋಕಸಭೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ಖಾತೆ ಸಹಾಯಕ ಸಚಿವ ಸುಭಾಷ್ ಸರ್ಕಾರ್, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಸುರಕ್ಷಿತವಾಗಿ, ಸ್ವಚ್ಛವಾಗಿ ಇರುವ ವ್ಯವಸ್ಥೆಗಳನ್ನು ಹಾಗೂ ಅವರಿಗೆ ಅನುಕೂಲವಾಗಿ ಇರುವ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಯುಜಿಸಿ ಈಗಾಗಲೇ ನಿಯಮಗಳನ್ನು ಜಾರಿಗೊಳಿಸಿದೆ. ಜತೆಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸುವಂತೆ ಸೂಚಿಸಿದೆ ಎಂದರು.
ಪ್ರಧಾನಿ ಮೋದಿಯವರು ನಡೆಸಿಕೊಡುವ “ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೊದಲ ಐದು ಆವೃತ್ತಿಗಳಿಗೆ 28 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಶಿಕ್ಷಣ ಖಾತೆ ಸಹಾಯಕ ಸಚಿವೆ ಅನ್ನಪೂರ್ಣಾ ದೇವಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2018ರಲ್ಲಿ 3.67 ಕೋಟಿ ರೂ., 2019ರಲ್ಲಿ 5.69 ಕೋಟಿ ರೂ., 2020ರಲ್ಲಿ 5.69 ಕೋಟಿ ರೂ., 2021ರಲ್ಲಿ 6 ಕೋಟಿ ರೂ., 2022ರಲ್ಲಿ 8.61 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂದರು.