Advertisement
ಆ ಬಳಿಕ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರಾದ ಸುರೇಶ್ ಖಾರ್ವಿಯವರು ಪುರಸಭೆಯ ನಾಮ ಸದಸ್ಯ ಕೇಶವ್ ಭಟ್ ಅವರಿಗೆ ವಿಷಯ ತಿಳಿಸಿದ್ದು, ಅವರು ತತ್ ಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಗಂಭೀರತೆ ಅರಿತು, ಪುರಸಭೆಯ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಮಳೆ ನೀರು ಹರಿದು ಹೋಗಲು ತುರ್ತು ಕ್ರಮ ಕೈಗೊಂಡಿದ್ದಾರೆ. ಆ ಬಳಿಕವಷ್ಟೇ ಸಂಚಾರ ವ್ಯವಸ್ಥೆ ಸುಗಮಗೊಂಡಿತು. ಸುಗಮ ಸಂಚಾರ ವ್ಯವಸ್ಥೆ ಮಾಡುವಲ್ಲಿ ಕಾರ್ಯ ನಡೆಯುವಾಗ, ಪುರಸಭೆಯ ಅಧಿಕಾರಿಗಳು, ಸಿಬಂದಿ, ಪೌರ ಕಾರ್ಮಿಕರು, ಸ್ಥಳೀಯರು, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಸಿಬಂದಿ ಸಹಕರಿಸಿದರು.
ಮದ್ದುಗುಡ್ಡೆ ವಾರ್ಡಿನಲ್ಲಿ ಚರಂಡಿಯಿಲ್ಲದೆ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮಸ್ಯೆಯಾಗಲಿದೆ ಎನ್ನುವ ಕುರಿತು ‘ಉದಯವಾಣಿ’ ಪತ್ರಿಕೆಯು ತನ್ನ ವಾರ್ಡಿನಲ್ಲಿ ಮಳೆಗಾಲ ಎನ್ನುವ ಸರಣಿ ಅಭಿಯಾನದಲ್ಲಿ ಜೂ. 10 ರಂದು ವರದಿ ಪ್ರಕಟಿಸಿ, ಎಚ್ಚರಿಸಿತ್ತು. ಆದರೆ ಆಗ ಎಚ್ಚೆತ್ತುಕೊಳ್ಳದೇ, ಅನಾಹುತ ಸಂಭವಿಸಿದ ಅನಂತರ ಎಚ್ಚೆತ್ತುಕೊಂಡಿದೆ.