Advertisement

ಯಾವ ಸಮಸ್ಯೆಯೂ ಶಾಶ್ವತವಲ್ಲ…

11:18 AM Mar 22, 2020 | Lakshmi GovindaRaj |

ಕರೋನಾ ರಜೆಯನ್ನು ಶಾಲಾ ಮಕ್ಕಳ ಪೋಷಕರು ಸದುಪಯೋಗ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ. ಮಧ್ಯಾಹ್ನದ ಹೊತ್ತು ಚೌಕಾಬಾರ, ಕೇರಂ, ಹುಲಿಕಲ್ಲಾಟ ಇಂಥವನ್ನು ಆಡಿ, ನೀವು ಬೇಕೆಂದೇ ಸೋತು ಮಕ್ಕಳನ್ನು ಗೆಲ್ಲಿಸಿ. ಏಕೆಂದರೆ, ಶಾಲೆಯಲ್ಲಿ ಯಾವಯಾವುದೋ ಕಾರಣಕ್ಕೆ ಸೋಲಿನ ಅನುಭವವಾಗುತ್ತಾ ಅವರ ಪುಟ್ಟ ಮನಸ್ಸು ಕುಸಿದಿರುತ್ತದೆ.

Advertisement

ಮನೆಯ ಸಂಪ್ರದಾಯಿಕ ಅಡುಗೆ ತಿಂಡಿಗಳ ರುಚಿತೋರಿಸಿ. ಜಂಕ್‌ ಫ‌ುಡ್‌ ಅವಾಂತರದಲ್ಲಿ ಶುಚಿರುಚಿಯಾದ ಮತ್ತು ಆರೋಗ್ಯ ವರ್ಧಿಸುವ ಅಡುಗೆ ತಿಂಡಿಗಳೇ ಮನೆಗಳಿಂದ ಮಾಯವಾಗುತ್ತಿವೆ. ಅದರ ಪುನರುತ್ಥಾನ ಮಾಡಿ. ಗಂಡುಮಕ್ಕಳಿಗೂ ಹೆಣ್ಣು ಮಕ್ಕಳ ಜೊತೆ ಸಣ್ಣಪುಟ್ಟ ಅಡುಗೆ ಕಲಿಸಿ. ಅಡುಗೆಮನೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಅಲ್ಲಿಯ ಕ್ರಿಯಾಪದಗಳಾದ ಕಾಯುವ, ಬೇಯುವ, ಆರುವ, ತಾಳಿಸುವ ಎಲ್ಲ ಪದಗಳೂ ಜೀವನಕ್ಕೂ ಅನ್ವಯ.

ಭಾವನೆಗಳನ್ನು ಜಾಣತನದಲ್ಲಿ ಬಳಸುವ Emotional intelligence ಅನ್ನು ನೀವೂ ಅಳವಡಿಸಿಕೊಂಡು ಮಕ್ಕಳಿಗೂ ಕಲಿಸಿ. ಎಲ್ಲಕ್ಕಿಂತಾ ಮುಖ್ಯವಾಗಿ ಕರೋನಾ ಕಾರಣಕ್ಕೆ ಯಾರನ್ನೂ ದೂರದೇ ಮುಂದೆಬರುವ ಎಲ್ಲ ಸಂಕಷ್ಟಗಳನ್ನೂ ಎದುರಿಸಲು ಬೇಕಾದ ಆತ್ಮಶಕ್ತಿಯನ್ನು ಮತ್ತು ಸಕಾರಾತ್ಮಕ ನಿಲುವುಗಳನ್ನು ನೀವೂ ಬೆಳೆಸಿಕೊಳ್ಳಿ ಮಕ್ಕಳಲ್ಲೂ ಬೆಳೆಯಲು ಸಹಾಯಮಾಡಿ. “ಯಾವ ಸಮಸ್ಯೆಯೂ ಶಾಶ್ವತವಲ್ಲ’ ಎನ್ನುವ ಚಾರ್ಲಿಚಾಪ್ಲಿನ್ನನ ನಂಬಿಕೆ, ನಮ್ಮದೂ ಆಗಲಿ.

* ಶಾಂತಾ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next