Advertisement

6 ತಿಂಗಳು ದಿಗ್ವಿಜಯ್‌ ಟ್ವೀಟ್‌ ಮಾಡಲ್ಲ, ರೀಟ್ವೀಟ್‌ ಮಾತ್ರ!

07:00 AM Oct 01, 2017 | Team Udayavani |

ನರಸಿಂಗ್‌ಪುರ: ಇನ್ನು 6 ತಿಂಗಳ ಕಾಲ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ರಾಜಕೀಯ ಮಾಡಲ್ಲ, ಟ್ವೀಟ್‌ ಮಾಡಲ್ಲ! ಅಚ್ಚರಿಯಾದರೂ ಇದು ಸತ್ಯ. ಶನಿವಾರದಿಂದ 3,300 ಕಿ.ಮೀ. ದೂರದ ನರ್ಮದಾ ಪರಿಕ್ರಮ ಯಾತ್ರೆಯನ್ನು ಅವರು ಕೈಗೊಂಡಿದ್ದು, 6 ತಿಂಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ. 

Advertisement

ದ್ವಾರಕಾ-ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಆಶೀರ್ವಾದ ಪಡೆದು ಬರ್ಮಾನ್‌ ಘಾಟ್‌ನಿಂದ ಯಾತ್ರೆ ಆರಂಭಿಸಿದ ದಿಗ್ವಿಜಯ್‌ ಅವರು, ಪ್ರಯಾಣ ಮುಗಿಯುವವರೆಗೂ ರಾಜಕೀಯ ವಿಚಾರ ಮಾತನಾಡುವುದಿಲ್ಲ, ಟ್ವೀಟ್‌ಗಳನ್ನು ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಆದರೆ, ಮತ್ತೂಬ್ಬರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next