Advertisement

ಪಣಜಿ: ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಯಾವುದೇ ಯೋಜನೆ ಇಲ್ಲ

07:55 PM Dec 08, 2022 | Team Udayavani |

ಪಣಜಿ: ಬಿಜೆಪಿ ಸರ್ಕಾರದಿಂದ ಗೋವಾ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಯಾವುದೇ ಯೋಜನೆ ಇಲ್ಲ. ರಾಜ್ಯದಲ್ಲಿ ಶೇ.70ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಸಿಎಂಐಇ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಆಡಳಿತ ನಡೆಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಕಳೆದ ಹತ್ತು ವರ್ಷಗಳಲ್ಲಿ ಸಾಬೀತಾಗಿದೆ. ಬಿಜೆಪಿ ಸರ್ಕಾರವು ಉದ್ಯೋಗ ಆಧಾರಿತ ಯೋಜನೆಯನ್ನು ಜಾರಿಗೊಳಿಸಲು ಕೌಶಲ್ಯ ಶಿಕ್ಷಣದ ಅಗತ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಟೀಕಿಸಿದ್ದಾರೆ.

Advertisement

ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.70ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂಬುದು ಸಿಎಂಐಇ ಸಮೀಕ್ಷೆಯಿಂದ ಮತ್ತೊಮ್ಮೆ ಬಹಿರಂಗವಾಗಿದ್ದು, ಹಿಂದಿನ ವರದಿಯಲ್ಲಿದ್ದ ವರದಿ ತಪ್ಪಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಈಗ ಅದೇ ವರದಿಯ ಬಗ್ಗೆ ತಮ್ಮ ನಿಲುವು ಬದಲಿಸಿಕೊಳ್ಳಬೇಕಿದೆ. ಗೋವಾದಲ್ಲಿ ನಿರುದ್ಯೋಗದ ಅಂಕಿ ಅಂಶವನ್ನು ಪ್ರಕಟಿಸುವ ಮೂಲಕ ಪ್ರಧಾನಿ ನೇತೃತ್ವದ ನೀತಿ ಆಯೋಗವೂ ಬಿಜೆಪಿ ಸರ್ಕಾರಕ್ಕೆ ಮನೆ ದಾರಿ ತೋರಿಸಿದ್ದಾರೆ ಹೇಳಿದರು.

ಕೌಶಲ್ಯ ಶಿಕ್ಷಣದತ್ತ ಗಮನ ಹರಿಸಿದ ಮುಖ್ಯಮಂತ್ರಿ, ಶಿಕ್ಷಣದ ಮಹತ್ವವನ್ನು ಯುವಕರಿಗೆ ಮನವರಿಕೆ ಮಾಡಿಕೊಡಲು ಏನು ಮಾಡಿದರು ಎಂಬುದನ್ನು ಹೇಳಬೇಕು. ಕೇವಲ ನಕಲಿ ಪ್ರಚಾರಕ್ಕಾಗಿ ಉದ್ಯೋಗ ಮೇಳ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಗೋವಾದ ನಿರುದ್ಯೋಗಿಗಳ ಸರಳ ಅಂಕಿಅಂಶಗಳಿಲ್ಲ ಎಂಬುದು ಕಳೆದ ವಿಧಾನಸಭೆ ಅಧಿವೇಶನಗಳಲ್ಲಿ ತಾರಕಕ್ಕೇರಿದ ಪ್ರಶ್ನೆಗಳಿಗೆ ಉತ್ತರದಿಂದ ಸ್ಪಷ್ಟವಾಗಿದೆ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ರಾಜ್ಯ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next