ಚಿಕ್ಕಬಳ್ಳಾಪುರ: ಕಾರ್ತೀಕ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹಾಗೂ ನೂರಾರು ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇವಾಲಯಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕಾರ್ತೀಕ ಮಾಸದಲ್ಲಿ ಭೇಟಿ ನೀಡುವ ಭಕ್ತರು ದೇವಾಲಯದ ಒಳಾಂಗಣದಲ್ಲಿ300 ಕ್ಕಿಂತಲೂ ಹೆಚ್ಚು ಜನ ನಿಲ್ಲದಂತೆ ಕ್ರಮ ವಹಿಸಲಾಗಿದೆ. ದರ್ಶನಕ್ಕೆ ಬೆಳಗ್ಗೆ 5 ರಿಂದ ಸಂಜೆ 8 ಗಂಟೆ ವರೆಗೆ ಅವಕಾಶಕಲ್ಪಿಸಲಾಗಿದೆ. ಈ ಬಾರಿ ದೀಪೋತ್ಸವಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ವಿಶೇಷ ಪೂಜೆ: ಕಾರ್ತೀಕ ಮಾಸದಲ್ಲಿ ಭೋಗನಂದೀಶ್ವರ ದೇವಾಲಯದಲ್ಲಿ ಶಿವಪಾರ್ವತಿ, ಗಿರಿಜಾಂಭ, ಅರುಣಾಚಲೇಶ್ವರ ಸೇರಿದಂತೆ ಪ್ರಮುಖ ದೇವರುಗಳ ಪೂಜೆಯನ್ನು ವಿಶೇಷವಾಗಿ ನೆರವೇರಿಸಲಾಗುತ್ತದೆ. ಆದರೆ, ಪ್ರಸ್ತುತ ದಿನಗಳಲ್ಲಿ ಕೊರೊನಾಮಹಾಮಾರಿ ವ್ಯಾಪಕವಾಗಿ ಹರಡಿರುವುದರಿಂದ ನಿಯಂತ್ರಣವೇರಲು ಜನದಟ್ಟಣೆ ತಡೆಯುವುದು ಅವಶ್ಯಕವಾಗಿದೆ ಎಂದರು.
ಕಾರ್ತೀಕ ಮಾಸದಲ್ಲಿ ವಿವಿಧ ಪ್ರದೇಶಗಳಿಂದ ಭೋಗನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಭಕ್ತರು ಸಲ್ಲಿಸುವ ಪ್ರತೀತಿ ನಡೆದುಕೊಂಡು ಬಂದಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ಶಿವನ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರತಿದಿನಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.ಗಡಿಜಿಲ್ಲೆಯಯಾಗಿರುವುದರಿಂದನೆರೆ ರಾಜ್ಯದಿಂದಲೂ ದರ್ಶನಕ್ಕೆ ಆಗಮಿಸುತ್ತಾರೆ. ಅದರಲ್ಲೂ ಕಾರ್ತೀಕಮಾಸದ ಸೋಮವಾರ 5000ಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಪ್ರಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.