Advertisement

ಮಣಿಪಾಲ: ಫ‌ುಟ್‌ಪಾತ್‌ ವಾಹನಗಳ ತೆರವು

06:00 AM Jul 13, 2018 | |

ಉಡುಪಿ: ಎಸ್‌ಪಿ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಕೇಳಿಬಂದ ಸಾರ್ವಜನಿಕರ ದೂರು, ಉದಯವಾಣಿ ಯಲ್ಲಿ ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮಣಿಪಾಲ ಟೈಗರ್‌ ಸರ್ಕಲ್‌ನಿಂದ ಎಂಐಟಿವರೆಗೆ ಮುಖ್ಯರಸ್ತೆಯ ಫ‌ುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡುವ ವಾಹನ ತೆರವುಗೊಳಿಸಲಾರಂಭಿಸಿದ್ದಾರೆ.

Advertisement

ಫ‌ುಟ್‌ಪಾತ್‌ನ ಉದ್ದಕ್ಕೂ ರಿಬ್ಬನ್‌ ಬ್ಯಾರಿಯರ್‌ ಅಳವಡಿಸಿ ವಾಹನಗಳು ಫ‌ುಟ್‌ಪಾತ್‌ ಮೇಲೇರದಂತೆ ತಡೆಯಲಾಗುತ್ತಿದೆ. ಒಂದು ವೇಳೆ ಫ‌ುಟ್‌ಪಾತ್‌ ಮೇಲೇರಿದರೂ ಕೂಡಲೇ ತೆರವುಗೊಳಿಸಲು ಸಿಬಂದಿ ನಿಯೋಜಿಸಲಾಗಿದೆ. ಸದ್ಯಕ್ಕೆ ಫ‌ುಟ್‌ಪಾತ್‌ ಒಂದಷ್ಟು ಮುಕ್ತವಾಗಿದೆ. ಆದರೆ ರಸ್ತೆ ಬದಿ ವಾಹನ ನಿಲುಗಡೆಗೆ ಮುಕ್ತಿ ದೊರೆಯ ಬೇಕಿದೆ. ಅಂತೆಯೇ ಇಲ್ಲಿನ ರಸ್ತೆಗಳ ಹೊಂಡಗಳನ್ನು ಕೂಡ ತುರ್ತಾಗಿ ಮುಚ್ಚಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಪೋನ್‌ -ಇನ್‌ ಕಾರ್ಯಕ್ರಮದಲ್ಲಿ ಬಂದ ಕರೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಎಸ್‌ಪಿ ಲಕ್ಷ್ಮಣ್‌ ನಿಂಬರಗಿ ಅವರು ಫ‌ುಟ್‌ಪಾತ್‌ ತೆರವುಗೊಳಿಸುವ ಮತ್ತು ಪೊಲೀಸ್‌ ಸಿಬಂದಿ ನಿಯೋಜಿಸುವ ಭರವಸೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next