Advertisement

ಮುಟ್ಟಿಗೆ ಸಂಬಳದ ರಜೆ ಇಲ್ಲ- ಕೇಂದ್ರವು ಈ ಕುರಿತು ಯಾವುದೇ ನೀತಿ ರೂಪಿಸುವುದಿಲ್ಲ ಎಂಬ ಸುಳಿವು

08:44 PM Dec 15, 2023 | Pranav MS |

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ (ಋತುಚಕ್ರ) ಕಾರಣಕ್ಕಾಗಿ ಸಂಬಳ ಸಹಿತ ಸಹಿತ ರಜೆ ನೀತಿ ಅಗತ್ಯವಿಲ್ಲ ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವು ಈ ಕುರಿತು ಯಾವುದೇ ನೀತಿ ರೂಪಿಸುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಅವರ ಹೇಳಿಕೆಗೆ ಕೆಲವರು ಆಕ್ಷೇಪ ಮಾಡಿದ್ದರೆ, ಇನ್ನಿತರರು ಬೆಂಬಲ ನೀಡಿದ್ದಾರೆ. ಕೆಲ ರಾಷ್ಟ್ರಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

Advertisement

ಸಚಿವೆ ಸ್ಮತಿ ಹೇಳಿದ್ದೇನು?:
ಋತುಚಕ್ರವು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನದ ಸಹಜ ಭಾಗವಾಗಿದೆ. ಹೀಗಾಗಿ ವೇತನ ಸಹಿತ ರಜೆ ನೀತಿ ರೂಪಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ರಾಜ್ಯಸಭೆಯಲ್ಲಿ ಆರ್‌ಜೆಡಿ ಸಂಸದ ಮನೋಜ್‌ ಕುಮಾರ್‌ ಝಾ ಕೇಳಿದ ಪ್ರಶ್ನೆಗೆ ಸ್ಮತಿ ಇರಾನಿ ಉತ್ತರಿಸಿದ್ದಾರೆ. ಕಳೆದ ವಾರ ಸಂಸದ ಶಶಿ ತರೂರ್‌ ಕೇಳಿದ್ದ ಪ್ರಶ್ನೆಗೆ ರಜೆ ನೀಡುವ ಪ್ರಸ್ತಾಪ ಇಲ್ಲವೆಂದಿದ್ದರು.

ಋತುಸ್ರಾವವು ಒಂದು ಆಯ್ಕೆಯಲ್ಲ. ಇದು ಜೈವಿಕ ಕ್ರಿಯೆ. ಸಂಬಳದ ರಜೆಯನ್ನು ನಿರಾಕರಿಸುವುದು ಅಸಂಖ್ಯಾತ ಮಹಿಳೆಯರು ಅನುಭವಿಸುವ ನಿಜವಾದ ನೋವನ್ನು ನಿರ್ಲಕ್ಷಿಸುತ್ತದೆ
ಕೆ.ಕವಿತಾ, ಬಿಆರ್‌ಎಸ್‌ ಎಂಎಲ್‌ಸಿ

ಇತರ ದೇಶಗಳಲ್ಲಿ ಹೇಗೆ ಇದೆ?
ಸ್ಪೇನ್‌:
ಮಹಿಳಾ ಉದ್ಯೋಗಿಗಳು ವಾರ್ಷಿಕವಾಗಿ 4 ದಿನಗಳ ವೇತನದ ರಜೆ ಪಡೆಯಲು ಅವಕಾಶವಿದೆ. ಐರೋಪ್ಯ ಒಕ್ಕೂಟದಲ್ಲಿ ಋತು ಚಕ್ರದ ರಜೆ ತೆಗೆದುಕೊಳ್ಳಲು ಅನುಮತಿ ನೀಡಿದ ಮೊದಲ ದೇಶ
ಇಂಡೋನೇಷ್ಯಾ:
ಮಹಿಳೆಯರಿಗೆ ಪೂರ್ವ ಸೂಚನೆ ನೀಡದೆ ತಿಂಗಳಿಗೆ ಎರಡು ದಿನಗಳ ಸಂಬಳದ ಮುಟ್ಟಿನ ರಜೆ ಹಕ್ಕು ನೀಡುವ ಕಾನೂನು ರೂಪಿಸಿದೆ.
ಜಪಾನ್‌:
ಕಂಪನಿಗಳು ಮಹಿಳೆಯರಿಗೆ ಋತುಚಕ್ರದ ರಜೆ ಕೋರಿದರೆ ಪೂರ್ಣ ಅಥವಾ ಭಾಗಶಃ ವೇತನ ನೀಡುತ್ತವೆ.
ದಕ್ಷಿಣ ಕೊರಿಯಾ:
ತಿಂಗಳಿಗೆ ಒಂದು ದಿನ ಮುಟ್ಟಿನ ರಜೆಗೆ ಅರ್ಹತೆ ಇದೆ. ನಿರಾಕರಿಸುವ ಉದ್ಯೋಗದಾತರು 5 ಮಿಲಿಯನ್‌ ವರೆಗೆ ದಂಡ ಕಟ್ಟಬೇಕಾಗಿದೆ.
ತೈವಾನ್‌:
ಮಹಿಳೆಯರಿಗೆ ವರ್ಷಕ್ಕೆ 3 ದಿನಗಳ ಮುಟ್ಟಿನ ರಜೆ.
ವಿಯೆಟ್ನಾಂ:
ಪ್ರತಿ ತಿಂಗಳು 3 ದಿನಗಳವರೆಗೆ ಮುಟ್ಟಿನ ರಜೆ ಲಭ್ಯವಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next