Advertisement

80 ದಾಟಿರುವ ಖರ್ಗೆಗಾಗಿ ಯಾರು ದುಃಖಿಸುವವರೇ ಇಲ್ಲ: ಬಿಜೆಪಿ ವಂಗ್ಯ

02:35 PM Aug 05, 2022 | Team Udayavani |

ಬೆಂಗಳೂರು: ನ್ಯಾಶನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಮಾಡಿದೆ. ಈ ವಿಚಾರವಾಗಿ ಬಿಜೆಪಿಯು ಕಾಂಗ್ರೆಸ್ ಗೆ ಟೀಕೆ ಮಾಡಿದೆ.

Advertisement

CongressAgainstDalits ಎಂಬ ಹ್ಯಾಷ್ ಟ್ಯಾಗ್ ಅಡಿ ಸರಣಿ ಕೂ ಮಾಡಿದೆ ಬಿಜೆಪಿಯು, ಸಿದ್ದರಾಮಯ್ಯ, ಡಿಕೆಶಿ ಆದಿಯಾಗಿ ಕಾಂಗ್ರೆಸ್‌ ನಾಯಕರೆಲ್ಲರೂ 75 ರ ಈ ಇಳಿ ಹರೆಯದಲ್ಲೂ ಸೋನಿಯಾ ಇಡಿ ವಿಚಾರಣೆಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮರುಕ ಪಟ್ಟರು. ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ, ದುಃಖಿಸುವವರೇ ಇಲ್ಲ! ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಗಾಂಧಿ ದೆಹಲಿ ಪೊಲೀಸರ ವಶಕ್ಕೆ

ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುವ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಕಲಿ ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿರುವ ದಲಿತ ನಾಯಕ ಖರ್ಗೆ ಅವರನ್ನು ತನಿಖೆ ನಡೆಸುತ್ತಿರುವಾಗ ಕಾಂಗ್ರೆಸ್‌ ಪಕ್ಷ ಮೌನವಾಗಿದೆ. ಏಕೆ ಈ ತಾರತಮ್ಯ? ನಕಲಿ ಗಾಂಧಿಗಳು ತನಿಖಾ ಸಂಸ್ಥೆಯ ಎದುರು ವಿಚಾರಣೆಗೆ ಹಾಜರಾದಾಗ ಕಾಂಗ್ರೆಸ್‌ ಪಕ್ಷ ಆಕಾಶ ಭೂಮಿ ಒಂದಾಗುವಂತೆ ಪ್ರತಿಭಟಿಸಿತು. ಆದರೆ ಈಗ ದಲಿತ ನಾಯಕ, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಿ ನಿರ್ದೇಶನಾಲಯದ ಎದುರು ಕುಳಿತಾಗ ಕಾಂಗ್ರೆಸ್‌ ದಿವ್ಯ ಮೌನ ಅನುಸರಿಸುತ್ತಿದೆ. ಏಕೆ ಈ ದ್ವಂದ್ವ ನೀತಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Koo App

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next