Advertisement

ಕೊಹ್ಲಿ ವಿರುದ್ಧ ಯಾರೂ ದೂರು ನೀಡಿಲ್ಲ!

08:03 AM Oct 01, 2021 | Team Udayavani |

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಯಾವುದೇ ಭಾರತೀಯ ಕ್ರಿಕೆಟಿಗ ಬಿಸಿಸಿಐಗೆ ದೂರು ನೀಡಿಲ್ಲ… ಹೀಗೆಂದು ಸ್ಪಷ್ಟನೆ ನೀಡಿರುವುದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌. ಮಾಧ್ಯಮಗಳಲ್ಲಿ ಯಾಕೆ ಹೀಗೆ ಸುಳ್ಳುಸುಳ್ಳು ವರದಿಗಳು ಬರುತ್ತಿವೆಯೋ ಗೊತ್ತಿಲ್ಲ. ಇದೀಗ ಅಧಿಕೃತವಾಗಿ ಹೇಳುತ್ತಿದ್ದೇನೆ; ಕೊಹ್ಲಿ ವಿರುದ್ಧ ಮೌಖೀಕವಾಗಿಯಾಗಲೀ, ಲಿಖಿತವಾಗಿಯಾಗಲೀ ಯಾರೂ ದೂರು ನೀಡಿಲ್ಲ.

Advertisement

ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದು ಅವರ ವೈಯಕ್ತಿಕ ನಿರ್ಧಾರ ಎಂದು ಧುಮಾಲ್‌ ಹೇಳಿದ್ದಾರೆ. ಹೀಗೆಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ಮಾಧ್ಯಮಗಳು ಇಂತಹ ಸಲ್ಲದ ವರದಿಗಳನ್ನು ಮಾಡುವು  ದನ್ನು ನಿಲ್ಲಿಸ ಬೇಕು. ಎಲ್ಲ ಸುದ್ದಿಗಳಿಗೂ ಬಿಸಿಸಿಐ ಸ್ಪಷ್ಟನೆ ಕೊಡುತ್ತಾ ಇರುವುದು ಸಾಧ್ಯ ವಿಲ್ಲ. ಹಾಗೆಯೇ ನಾವ್ಯಾರೂ ನಾಯ ಕತ್ವ ಬದಲಾವಣೆಯ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಖಡಾಖಂಡಿತ ಸ್ವರದಲ್ಲಿ ಧುಮಾಲ್‌ ಹೇಳಿದ್ದಾರೆ.

ಏನೇನು ವರದಿಗಳಾಗಿದ್ದವು?: ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿಅಂದರೆ ಸೆ.13ರಂದು ಟಿ20 ವಿಶ್ವಕಪ್‌ ಮುಗಿದ ನಂತರ ಟಿ20 ನಾಯಕತ್ವದಿಂದ ಹೊರಹೋಗುವುದಾಗಿ ಕೊಹ್ಲಿ ಪ್ರಕಟಿಸಿದ್ದರು. ಬ್ಯಾಟಿಂಗ್‌ ಮೇಲೆ ಗಮನ ಕೇಂದ್ರೀಕರಿಸುವುದು, ಹಾಗೆಯೇ ಏಕದಿನ ಮತ್ತು ಟೆಸ್ಟ್‌ ನಾಯಕತ್ವವನ್ನು ಸರಿಯಾಗಿ ನಿಭಾಯಿಸಲು ಈ ನಿರ್ಧಾರ ಮಾಡಿದ್ದಾಗಿ ಹೇಳಿದ್ದರು. ಇದಾದ ನಂತರ ತರಹೇವಾರಿ ವರದಿಗಳು ಪ್ರಕಟವಾಗುತ್ತಿವೆ.

ವದಂತಿ 1: ಕೊಹ್ಲಿಗೆ ಆರ್‌.ಅಶ್ವಿ‌ನ್‌ರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುವುದು ಇಷ್ಟವಿರಲಿಲ್ಲ. ಅವರ ಬದಲು ಯಜುವೇಂದ್ರ ಚಹಲ್‌ ಬೇಕೆಂದು ಕೇಳಿದ್ದರೆನ್ನುವುದು ಒಂದು ವರದಿ. ಅಶ್ವಿ‌ನ್‌ರನ್ನು ಇಂಗ್ಲೆಂಡ್‌ ವಿರುದ್ಧದ ನಾಲ್ಕೂ ಟೆಸ್ಟ್‌ ಪಂದ್ಯಗಳಲ್ಲಿ ಆಡಿಸಿರಲಿಲ್ಲ. ಕೊಹ್ಲಿ ಕೂಡಾ, ಒಬ್ಬ ಆಟಗಾರ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಬದ್ಧತೆ ತೋರಿಲ್ಲ ಎಂದಿದ್ದರಂತೆ. ಇದು ಅಶ್ವಿ‌ನ್‌ ವಿರುದ್ಧವೇ ನೀಡಿದ ಹೇಳಿಕೆ. ಇದರಿಂದ ಬೇಸತ್ತ ಅಶ್ವಿ‌ನ್‌, ಕೊಹ್ಲಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ದೂರು ನೀಡಿದ್ದಾರೆ ಎಂದು ವರದಿಗಳಾಗಿದ್ದವು.

ವದಂತಿ2: ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಕೊಹ್ಲಿಯನ್ನು ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೆಳಕ್ಕಿಳಿಸಬಹುದು. ಎರಡೂ ಮಾದರಿಗೆ ರೋಹಿತ್‌ ನಾಯಕರಾಗಬಹುದು.

Advertisement

ವದಂತಿ 3: ರೋಹಿತ್‌ ಶರ್ಮರನ್ನು ಸೀಮಿತ ಓವರ್‌ಗಳ ತಂಡದ ಉಪನಾಯಕತ್ವದಿಂದ ಕೆಳಕ್ಕಿಳಿಸಿ ಎಂದು ಕೊಹ್ಲಿ ಬಿಸಿಸಿಐಗೆ ಕೇಳಿದ್ದರು. ಹಾಗೆಯೇ ಕೊಹ್ಲಿ ವಿರುದ್ಧ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಬಿಸಿಸಿಐಗೆ ದೂರು ನೀಡಿದ್ದಾರೆ!.

Advertisement

Udayavani is now on Telegram. Click here to join our channel and stay updated with the latest news.

Next