ಮಂಗಳೂರು: ಸೇನೆಗೆ ಯುವಕರನ್ನು 4 ವರ್ಷ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವ “ಅಗ್ನಿಪಥ್’ ಯೋಜನೆಯಿಂದ ನಿರುದ್ಯೋಗಿಗಳಿಗೆ ಯಾವ ಪ್ರಯೋಜನವೂ ಆಗುವುದಿಲ್ಲ ಮತ್ತು ಇದರಿಂದ ಸೇನೆಯ ಸಾಮರ್ಥ್ಯವೂ ವೃದ್ಧಿಯಾಗುವುದಿಲ್ಲ. ಜನರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಈ ಯೋಜನೆಯಡಿ ಮಾಸಿಕ 30 ಸಾ. ರೂ. ವೇತನದಲ್ಲಿ 9 ಸಾವಿರ ರೂ.ಗಳನ್ನು ಭವಿಷ್ಯ ನಿಧಿ ಬದಲಿಗೆ ಸೇವಾ ನಿಧಿ ರೂಪದಲ್ಲಿ ನೀಡಲಾಗುತ್ತದೆ. ಇದಕ್ಕೆ ಬಡ್ಡಿದರವೂ ಕಡಿಮೆ. ನಾಲ್ಕು ವರ್ಷ ದುಡಿದವರಿಗೆ ಪಿಂಚಣಿ ಸೌಲಭ್ಯವೂ ಇಲ್ಲ. ನಿವೃತ್ತಿ ಆದ ಬಳಿಕ ಮಿಲಿಟರಿ ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯದ ಬಗ್ಗೆಯೂ ಉಲ್ಲೇಖವಿಲ್ಲ.
ಸೇನೆಯವರಿಗೆ ಸಿಗುವ ಬ್ಯಾಜ್ ಇಲ್ಲ ಎಂದರು.
ಜಿಲ್ಯಾಧ್ಯಕ್ಷ ಹರೀಶ್ ಕುಮಾರ್, ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಹರಿನಾಥ್, ನವೀನ್ ಡಿ’ಸೋಜ, ಜಯಶೀಲ ಅಡ್ಯಂ ತಾಯ, ಶಾಲೆಟ್ ಪಿಂಟೊ, ನೀರಜ್‌ಪಾಲ್, ಅಪ್ಪಿ, ರಮಾ ನಂದ ಪೂಜಾರಿ, ಮುಸ್ತಾಫ, ನಜೀರ್ ಬಜಾಲ್, ಶಬ್ಬೀರ್ ಉಪಸ್ಥಿತರಿದ್ದರು.