Advertisement
ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ನಟಿ ಅಲಿಯಾ. ಅವಳ ಯಶಸ್ಸಿಗೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಅಲಿಯಾ ನಟಿಸಿದ ಹೆಚ್ಚಿನ ಚಿತ್ರಗಳು ಹಿಟ್ ಆಗಿವೆ. ಇದರಲ್ಲಿ ಕೆಲವು ಪ್ರಯೋಗಾತ್ಮಕ ಪಾತ್ರಗಳೂ ಸೇರಿವೆ ಎನ್ನುವುದು ಗಮನಾರ್ಹ. ಉಡ್ತಾ ಪಂಜಾಬ್, ಹೈವೇ ಯಂತಹ ಚಿತ್ರಗಳು ಅಲಿಯಾಳನ್ನು ಭಿನ್ನ ನಟಿ ಎಂದು ಗುರುತಿಸಲು ಸಹಕಾರಿಯಾಗಿವೆ. ಇದೀಗ ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿರುವ ರಾಝಿ ಚಿತ್ರದಲ್ಲಿ ಅಲಿಯಾ ಇನ್ನೊಂದು ವಿಭಿನ್ನ ಪ್ರಯೋಗಕ್ಕೆ ತಯಾರಾಗಿದ್ದಾಳೆ. ಇದರ ಟೀಸರ್‌ನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಅಲಿಯಾಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೊಂದೇ ಅದರ ಯಶಸ್ಸಿನ ಮಾನದಂಡವಾಗಬಾರದು ಎನ್ನುವುದು ಅಲಿಯಾ ನಿಲುವು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದರೂ ಸಾಮಾಜಿಕವಾಗಿ ಪರಿಣಾಮ ಬೀರುತ್ತವೆ. ಒಟ್ಟಾರೆಯಾಗಿ ಚಿತ್ರ ಉಂಟು ಮಾಡಿರುವ ಗುಣಾತ್ಮಕ ಪರಿಣಾಮಗಳನ್ನು ಲೆಕ್ಕಕ್ಕೆ ಹಿಡಿದು ಅದರ ಯಶಸ್ಸು ಮತ್ತು ಸೋಲನ್ನು ನಿರ್ಧರಿಸಬೇಕೆನ್ನುವ ವಾದ ಮಂಡಿಸುತ್ತಾಳೆ ಅಲಿಯಾ. ಈ ಲೆಕ್ಕದಲ್ಲಿ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದ ಇಯರ್‌ನಿಂದ ಹಿಡಿದು ಎಲ್ಲವೂ ಹಿಟ್ ಚಿತ್ರಗಳೇ ಎನ್ನುತ್ತಾಳೆ ಅಲಿಯಾ. ರಾಝಿಯ ಬೆನ್ನಿಗೆ ಕಳಂಕ್ ಎಂಬ ಇನ್ನೊಂದು ಭಾರೀ ಬಜೆಟ್‌ನ ಚಿತ್ರವೂ ಬರಲಿದೆ. ಈ ಎರಡು ಚಿತ್ರಗಳು ಹಿಟ್ ಆದರೆ ನಂಬರ್ ಒನ್ ಪಟ್ಟ ಅಲಿಯಾಇಇಳದ್ದಾಗಲಿದೆ. Advertisement
ನಂಬರ್ ವನ್ ಅಲಿಯಾ
07:20 AM May 11, 2018 | |
Advertisement
Udayavani is now on Telegram. Click here to join our channel and stay updated with the latest news.