ವಾಷಿಂಗ್ಟನ್ : ಪಾಕಿಸ್ಥಾನ ನಮ್ಮೊಂದಿಗೆ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಅಮಾನತು ಗೊಳಿಸಿರುವ ಬಗ್ಗೆ ನಮಗೆ ಈ ತನಕ ಆ ದೇಶದಿಂದ ಯಾವುದೇ ಔಪಚಾರಿಕ ಮಾಹಿತಿ ಇಲ್ಲ ಎಂದು ಅಮೆರಿಕ ಹೇಳಿದೆ.
ಇದೇ ವೇಳೆ ಪಾಕ್ ಉನ್ನತ ನಾಯಕರು ಇಸ್ಲಾಮಾಬಾದ್‌ನಲ್ಲಿ, “ನಾವು ಅಮೆರಿಕದೊಂದಿಗಿನ ನಮ್ಮ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಅಮಾನತು ಗೊಳಿಸಿದ್ದೇವೆ’ ಎಂದು ಹೇಳುತ್ತಲೇ ಇದ್ದಾರೆ.
ಪಾಕಿಸ್ಥಾನದಿಂದ ಈ ಬಗ್ಗೆ ನಮಗೆ ಯಾವುದೇ ಔಪಚಾರಿಕ ಮಾಹಿತಿ ಈ ತನಕವೂ ಬಂದಿಲ್ಲ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಸ್ಪಷ್ಟಪಡಿಸಿದರು.
ಪಾಕಿಸ್ಥಾನಕ್ಕೆ ತಾನು ನೀಡುವ ಎಲ್ಲ ರೀತಿಯ ನೆರವನ್ನು ತಾನು ಅಮಾನತು ಮಾಡಿರುವುದಾಗಿ ಅಮೆರಿಕ ಹೇಳಿರುವುದಕ್ಕೆ ಪ್ರತಿಯಾಗಿ ಪಾಕಿಸ್ಥಾನ ಅಮೆರಿದೊಂದಿಗಿನ ತನ್ನ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ತಾನು ಅಮಾನತು ಗೊಳಿಸಿರುವುದಾಗಿ ಹೇಳಿದೆ.
ಆದರೆ ಪಾಕಿಸ್ಥಾನ ಗುಪ್ತಚರ ಸಹಕಾರ ಕೊಟ್ಟದ್ದಾಗಲೀ ಅದನ್ನು ನಿಲ್ಲಿಸಿದ್ದಾಗಲೀ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಐಎ ವಕ್ರಾ ಕೂಡ ಪ್ರತಿಕ್ರಿಯಿಸಿದರು.