ನವದೆಹಲಿ: ನೆಟ್ ಬ್ಯಾಂಕಿಂಗ್ ವ್ಯವಹಾರ ನಡೆಸುವ ಗ್ರಾಹಕರೇ ಗಮನಿಸಿ. ಆರ್‌ಬಿಐ ನೀಡಿರುವ ನೆಫ್ಟ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ಸೌಲಭ್ಯ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ಲಭ್ಯವಿರುವುದಿಲ್ಲ.
ತಾಂತ್ರಿಕ ಉನ್ನತೀಕರಣ ಮಾಡುವ ದೃಷ್ಟಿಯಿಂದ ಶನಿವಾರ ರಾತ್ರಿ 12 ಗಂಟೆ 1 ನಿಮಿಷದಿಂದ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಈ ಸೌಲಭ್ಯವನ್ನು ತಡೆ ಹಿಡಿಯಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಆದರೆ ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿರುವುದರಿಂದ ಗ್ರಾಹಕರು ಚಿಂತೆ ಮಾಡುವ ಅಗತ್ಯವಿಲ್ಲ. ದಿನದ 24 ಗಂಟೆಯೂ ಆನ್‌ಲೈನ್ ಮೂಲಕ ದೊಡ್ಡಮೊತ್ತವನ್ನು ಇನ್ನೊಬ್ಬರ ಖಾತೆಗೆ ಕಳುಹಿಸಲು ನೆಫ್ಟ್ ತಂತ್ರಜ್ಞಾನದ ಮೂಲಕ ಸಾಧ್ಯ. ತಕ್ಷಣ ಗ್ರಾಹಕರಿಗೆ ಹಣ ತಲುಪುತ್ತದೆ.
ಇದನ್ನೂ ಓದಿ :ಕೋವಿಡ್ ಸಂಕಷ್ಟ : ಬಡ ರೋಗಿಗಳ ನೆರವಿಗೆ ನಿಂತ ನಟ ಸಲ್ಮಾನ್ ಖಾನ್