Advertisement

Sirsi: ಅಡಿಕೆ ಬಗ್ಗೆ ಯಾವುದೇ ಆತಂಕ ಬೇಡ: ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ

06:04 PM Mar 12, 2024 | Team Udayavani |

ಶಿರಸಿ: ಇಡೀ ದೇಶದಲ್ಲಿ ಅಡಿಕೆಗೆ ಸಂಬಂಧಿಸಿ ಒಂದಷ್ಟು ಗಾಳಿ ಸುದ್ದಿ ಹರಡುತ್ತಿದೆ. ಅಡಿಕೆಗೆ ಯಾವುದೇ ಆತಂಕ ಬೇಡ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

Advertisement

ಅವರು ಮಂಗಳವಾರ ಸುದ್ದಿಗೋಷ್ಟಿ ನಡೆಸಿ, ಅಡಿಕೆ ಅಕ್ರಮ ಆಮದು ನಿರ್ಬಂಧಿಸಲು ಕೇಂದ್ರ ಸಚಿವರುಗಳು ಸೂಚಿಸಿದ್ದಾರೆ. ಶ್ರೀಲಂಕಾ ಮೂಲಕ ಅಡಿಕೆ ಆಮದಿಲ್ಲ. ಅದರ ಸತ್ಯಾಸತ್ಯತೆ ಅರ್ಥವಾಗುತ್ತಿಲ್ಲ. ಒಂದೊಂದು‌ ಸುದ್ದಿ ಒಂದೊಂದು ಇದೆ. ಐದು‌ ಲಕ್ಷ ಟನ್ ಅಡಿಕೆ ಆಮದಿಗೆ ಒಪ್ಪಂದ ಎನ್ನುತ್ತಾರೆ. ಆದರೆ ಇದು ಸುಳ್ಳು ಶ್ರೀಲಂಕಾದಿಂದ ಆಮದಾಗುವ ಅಡಿಕೆ‌ ಕೂಡ‌ ನಿರ್ಬಂಧಿತ ಇದೆ ಎಂದರು.

ಕೇಂದ್ರ ಸರಕಾರದ ಅಡಿಕೆ ಆಮದಾಗುವ ಬಗ್ಗೆ ಕಠಿಣ‌ ಸೂಚನೆ ಮಾಡಲಾಗಿದೆ. ಆಮದು ಅಡಿಕೆಗೆ ಸಂಬಂಧಿಸಿ ಅಡಿಕೆ ಯಾವುದೇ ಹೆಸರಿನಲ್ಲಿ ಬಂದರೂ ಕ್ರಮಕ್ಕೆ ಅಡಿಕೆ ಮಹಾ ಮಂಡಳಿ‌ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.

ನಮ್ಮ ಅಡಿಕೆಯ ಗುಣಮಟ್ಟಕ್ಕೆ ಉಳಿದ ದೇಶದ ಅಡಿಕೆ ಗುಣಮಟ್ಟಕ್ಕೂ ವ್ಯತ್ಯಾಸ ಇದೆ. ನಮ್ಮ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರನಲ್ಲಿ 47 ಸಾವಿರ ಟನ್ ಅಡಿಕೆ ಬೆಳೆಯಲಾಗುತ್ತದೆ.

ನಮ್ಮ‌ ಸಂಸ್ಥೆಯಲ್ಲಿ ಅಡಿಕೆ ಶೇಖರಣೆ ಇಲ್ಲ. ಮಾರಾಟ ಆಗುತ್ತಿದೆ. 10-12 ‌ಸಾವಿರ‌ ಕ್ವಿಂಟಾಲ್ ಅಡಿಕೆ ಶೇಖರಣೆ‌ ಇದೆ ಅಷ್ಟೇ. ಗುಣಮಟ್ಟದ ಅಡಿಕೆಗೆ ದರ ಇದ್ದೇ ಇದೆ ಎಂದರು.

Advertisement

ಅಡಿಕೆ ಗುಣಮಟ್ಟ‌ ಇದ್ದರೆ ಖರೀದಿ ಮಾಡುತ್ತೇವೆ. ಈಗಾಗಲೇ 79 ಸಾವಿರ ಅಡಿಕೆ‌ ಕ್ವಿಂಟಾಲ್ ಖರಿದಿ ಮಾಡಿದ್ದೇವೆ. ಹೊರ ರಾಜ್ಯದಲ್ಲೂ ಟಿಎಸ್ಎಸ್ ಅಡಿಕೆ ಘಟಕ ತೆರೆದಿದ್ದೇವೆ ಎಂದರು.

ರೈತರು ಅಡಿಕೆ ನೋಡಿ‌ ಬಿಡಬೇಕು. ಅಡಿಕೆ ಗುಣಮಟ್ಟ ಹಾಳಾಗಬಾರದು. ಅದನ್ನೂ ಗಮನಿಸಬೇಕಾಗಿದೆ ಎಂದರು.

ಶಿರಸಿ ಅಡಿಕೆ ಗುಣಮಟ್ಟ‌ ಇದೆ. ಅದನ್ನು ಬಿಟ್ಟು ‌ಖರೀದಿಸಬಾರದು ಎಂಬುದು ನಮ್ಮ ನಿಲುವು ಎಂದ ಅವರು, ಮೂರು ತಂಡದಿಂದ ಅಡಿಟ್ ನಡೆಯುತ್ತಿದೆ. ಎರಡು ಅಡಿಟರ್ಸ ನಡೆಸುತ್ತಿದ್ದಾರೆ. ವರದಿ ಶೀಘ್ರ ಬರಲಿದೆ. ದೊಡ್ಡ ಪ್ರಮಾಣದ ವ್ಯವಹಾರ ಇರುವದರಿಂದ ವರದಿ ಬರುವುದು ವಿಳಂಬವಾಗಿದೆ. ಸದಸ್ಯರ ಎದುರು‌ ಮೊದಲು ಹೇಳುತ್ತೇವೆ. ಅಡಿಟ್‌ ಮುಗಿದ ನಂತರ ಬೇರೆಯವರ ತರಬೇಕಾ? ಇವರನ್ನೇ ಮುಂದುವರಿಸಬೇಕಾ ಎಂದು ನೋಡುತ್ತೇವೆ ಎಂದರು.

ಸಾಲದ ಹೊರೆ ಹೆಚ್ಚಾದ ಸದಸ್ಯರಿಗೆ ಕಂತು ಕೊಟ್ಟು ನೆರವಾಗುವ ಬಗ್ಗೆ ಚಿಂತಿಸಿದ್ದೇವೆ ಎಂದರು.

ಸಂಸ್ಥೆ ಉಪಾಧ್ಯಕ್ಷ ಎಂ.ಎನ್.ಭಟ್ಟ ತೋಟಿಮನೆ,‌ ನಿರ್ದೇಶಕ ಗಣಪತಿ ಜೋಶಿ ಸೋಂದಾ, ವ್ಯವಸ್ಥಾಪಕ ನಿರ್ದೇಶಕ ವಿಜಯಾನಂದ ಭಟ್ಟ ಇದ್ದರು.

ಅಡಿಕೆ ಸ್ವೀಟ್ ಸುಫಾರಿಗೆ ಶೇ.18 ಜಿಎಸ್ ಟಿ ಇದೆ. ಅದನ್ನು ಶೇ. 5ಕ್ಕೆ ಇಳಿಸಲು ಸರಕಾರಕ್ಕೆ ಮನವಿ ಮಾಡಿದ್ದೇವೆ.
-ಗೋಪಾಲಕೃಷ್ಣ ವೈದ್ಯ,ಅಧ್ಯಕ್ಷ, ಟಿಎಸ್ ಎಸ್

ಇದನ್ನೂ ಓದಿ: Exam: 5, 8 ಮತ್ತು 9ನೇ ತರಗತಿಗಳ ಬೋರ್ಡ್‌ ಪರೀಕ್ಷೆಗೆ ಸುಪ್ರೀಂ ತಡೆ, ಪರೀಕ್ಷೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next